Recent Posts

Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸರಕಾರಿ ಪ್ರೌಡ ಶಾಲೆ ಸಾಲೆತ್ತೂರಿನಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ -ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ವಿಟ್ಲ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ಲಯನ್ಸ್ ಕ್ಲಬ್ ವಿಟ್ಲ. ಪ್ರಗತಿ ಬಂದು ಸ್ವಸಹಾಯ ಸಂಘ ಒಕ್ಕೂಟ ಸಾಲೆತ್ತೂರು, ಹಾಗೂ ಸರಕಾರಿ ಪ್ರೌಡ ಶಾಲೆ ಸಾಲೆತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರಕಾರಿ ಪ್ರೌಡ ಶಾಲೆ ಸಾಲೆತ್ತೂರು ಇಲ್ಲಿ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಸದಸ್ಯ ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡುತ್ತಾ ಮಹಾತ್ಮ ಗಾಂಧೀಜಿ ಅವರು ನಮ್ಮ ದೇಶ ರಾಮರಾಜ್ಯ ಆಗಬೇಕು ಅನ್ನುವ ಕನಸನ್ನು ಕಂಡಿದ್ದರು, ಇದಕ್ಕೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಡಿ ವೀರೇಂದ್ರ ಹೆಗ್ಡೆಯವರು ಮಧ್ಯವರ್ಜನ ಶಿಬಿರ, ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಹಮ್ಮಿಕೊಂಡು ನಮ್ಮ ರಾಜ್ಯದ ಸ್ವಾಸ್ಥ್ಯವನ್ನು ಕಾಪಾಡಲು ಪ್ರೇರಣೆದಾಯಕ ರಾಗಿರುತ್ತಾರೆ ಎಂದರು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪನ್ಮೂಲ ವ್ಯಕ್ತಿಗಳಾದ ಜನಜಾಗೃತಿ ವೇದಿಕೆಯ ಅಳಿಕೆ ವಲಯ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ ರವರು ವ್ಯಸನ ಎಂದರೆ ನಮ್ಮನ್ನು ನಿಧಾನವಾಗಿ ಕೊಳ್ಳುವ ವಿಷ..

ಜಾಹೀರಾತು
ಜಾಹೀರಾತು
ಜಾಹೀರಾತು

ದುರ್ಜನನಿಗೆ ಸರ್ವಾಂಗಗಳಲ್ಲಿ ವಿಷ ಇದೆ ಆದುದರಿಂದ ಅಂತವರ ಸಹವಾಸವನ್ನು ಮಾಡಬಾರದು. ವಿದ್ಯಾರ್ಥಿಗಳು ಕ್ರೇಜಿಗೆ ಬಲಿಯಾಗುವುದು ವ್ಯಸನಕ್ಕೆ ಬಲಿಯಾಗುವುದು ಸರಿಯಲ್ಲ. ಮಾಧ್ಯಮ ನಮಗೆ ಮನರಂಜನೆಗೆ ಮಾತ್ರ. ಸಿನಿಮಾದಲ್ಲಿ ಹೊಗೆ ಬಿಟ್ಟರೆ ಕೋಟಿ ಕೋಟಿ ಸಿಗುತ್ತದೆ ಅದೇ ನಾವು ಹೊಗೆ ಬಿಟ್ಟರೆ ಕೋಟಿ ಕೋಟಿ ಖರ್ಚಾಗುತ್ತದೆ. ಹಾಗಾಗಿ ಸದೃಢ ಮನಸ್ಸನ್ನು ಗಟ್ಟಿಯಾಗಿಸಬೇಕು. ವ್ಯಸನದ ಕಡೆ ಸೆಳೆಯದೆ ಉತ್ತಮ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟು. ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಹಿರಿಯ ಶಿಕ್ಷಕಿ ಸಾವಿತ್ರಿ ರವರು ದುಶ್ಚಟ ಗಳು ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿ ಗೆ ಕೊಳ್ಳಿ ಇಡುತದೆ. ಅವುಗಳಿಂದ ದೂರ ಇದ್ದರೆ ಬಾಳು ಬಂಗಾರವಗುತ್ತದೆ ಎಂದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ (ರಿ ) ವಿಟ್ಲ ಅಧ್ಯಕ್ಷ ರಜಿತ್ ಆಳ್ವ ಸಾಲೆತ್ತೂರು ಜನಜಾಗೃತಿ ವಲಯ ಅಧ್ಯಕ್ಷ ಅರವಿಂದ ರೈ.,ಒಕ್ಕೂಟ ಅಧ್ಯಕ್ಷರ ದಿನೇಶ್ ಶೆಟ್ಟಿ. ಲಯನ್ಸ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಸುದೇಶ್ ಬಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಜಯವಾತಿ ಸ್ವಾಗತಿಸಿ, ಶಿಕ್ಷಕಿ ದಿವ್ಯಾ ವಂದಿಸಿ, ವಲಯ ಮೇಲ್ವಿಚಾರಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.