Sunday, January 19, 2025
ಬೆಂಗಳೂರುಶುಭಾಶಯಸಿನಿಮಾಸುದ್ದಿ

ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಬಹುಭಾಷಾ ನಟಿ ಪ್ರಣೀತಾ ಸುಭಾಷ್ – ಕಹಳೆ ನ್ಯೂಸ್

ಹುಭಾಷಾ ನಟಿ ಪ್ರಣೀತಾ ಸುಭಾಷ್  2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಬೇಬಿ ಬಂಪ್  ಫೋಟೋಶೂಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಮತ್ತೆ ತಾಯಿಯಾಗ್ತಿರುವ ನಟಿ, ಸಖತ್ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೈಟ್ ಬಣ್ಣದ ಸ್ಲಿವ್‌ಲೆಸ್ ಗೌನ್‌ನಲ್ಲಿ ಪ್ರಣೀತಾ ಕಂಗೊಳಿಸಿದ್ದಾರೆ. ಮುಖದ ಗ್ಲೋ ಮತ್ತು ನಟಿಯ ಹಾಟ್‌ & ಗ್ಲ್ಯಾಮರಸ್‌ ಲುಕ್ ನೋಡಿ ನೆಟ್ಟಿಗರು ಸಂತೂರ್ ಮಮ್ಮಿ ಎಂದು ಹಾಡಿಹೊಗಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಅಂದಹಾಗೆ, ತುಂಬು ಗರ್ಭಿಣಿ ಪ್ರಣಿತಾ ಇತ್ತೀಚೆಗೆ ನಗರದ ಪ್ರತಿಷ್ಟಿತ ರೆಸಾರ್ಟ್‌ನಲ್ಲಿ ಬೇಬಿ ಶಾವರ್ ಪಾರ್ಟಿ ಆಯೋಜಿಸಿದ್ದು, ಅದರ ಫೋಟೋಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಪಕ್ಕಾ ವೆಸ್ಟರ್ನ್ ಸ್ಟೈಲ್ ಬೇಬಿ ಶವರ್ ಪಾರ್ಟಿಯಾಗಿದ್ದು ಪ್ರಣಿತಾ ಕುಟುಂಬ ವೈಟ್ ಅಂಡ್ ವೈಟ್ ಥೀಮ್ ಉಡುಗೆಯಲ್ಲಿ ಮಿಂಚಿದೆ. ಪತಿ, ನಾಲ್ಕು ವರ್ಷದ ಮಗಳು ಆರ್ನಾ ಡ್ರೆಸ್ ಕೋಡ್‌ನಲ್ಲಿ ಕಂಗೊಳಿಸಿದ್ದಾರೆ. ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ.

ಸಾಮಾನ್ಯವಾಗಿ ಪ್ರಣಿತಾ ಹಿಂದೂ ಸಂಪ್ರದಾಯದಲ್ಲಿ ಬರುವ ಎಲ್ಲಾ ಪೂಜೆ ಪುನಸ್ಕಾರ ಆಚರಣೆಯನ್ನ ಪಾಲಿಸುತ್ತಾ ಬಂದವರು, ಹಿಂದೆ ಚೊಚ್ಚಲ ಗರ್ಭಿಣಿ ಇದ್ದಾಗ ಸಾಂಪ್ರದಾಯಿಕ ಶೈಲಿಯಲ್ಲೇ ಸೀಮಂತ ಮಾಡಿಕೊಂಡಿದ್ದರು. ಇದೀಗ ಎರಡನೇ ಮಗು ಆಗಮನದ ಖುಷಿಯಲ್ಲಿ ಬದಲಾವಣೆಗೆಂದು ವೆಸ್ಟರ್ನ್ ಸ್ಟೈಲ್ ಪಾಲಿಸಿದಂತೆ ಕಾಣುತ್ತೆ, ಬಹುಶಃ ಪ್ರಣಿತಾಗೆ ಮುಂದೆ ಸಾಂಪ್ರದಾಯಿಕ ಸೀಮಂತ ಮಾಡಿಕೊಳ್ಳುವ ಸೂಚನೆಯೂ ಇದೆ. ಇನ್ನು ವಿದೇಶದಲ್ಲಿ ಹಲವೆಡೆ ಬೇಬಿ ಶಾವರ್ ದಿನದಲ್ಲಿ ಜೆಂಡರ್ ರಿವೀಲ್ ಕೂಡ ನಡೆಯುತ್ತೆ, ಆದರೆ ಭಾರತದಲ್ಲಿ ಇದು ಅಪರಾಧ. ಇನ್ನು ವಿದೇಶಗಳಲ್ಲಿ ಹುಟ್ಟೋ ಮಗು ಹೆಣ್ಣೋ ಗಂಡೋ ಎಂಬ ಥೀಮ್‌ನಲ್ಲಿ ಬೇಬಿ ಶಾವರ್ ಪಾರ್ಟಿ ಅಲಂಕಾರ ಮಾಡಲಾಗುವುದು ವಿಶೇಷ.

ಪ್ರಣೀತಾ ಬೇಬಿ ಶಾವರ್ ಪಾರ್ಟಿಯಲ್ಲಿ ಬಿಳಿ-ನೀಲಿ-ಪಿಂಕ್ ಮಿಶ್ರಿತ ಬಣ್ಣದ ಬಲೂನ್‌ಗಳನ್ನ ಕಟ್ಟಿ ಸಿಂಗರಿಸಲಾಗಿದೆ. ಕಾರ್ಯಕ್ರಮದಲ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಪ್ರಣೀತಾ ಥೀಮ್‌ಗೆ ತಕ್ಕಂತೆ ವೆಸ್ಟರ್ನ್ ಸ್ಟೈಲ್ ಗೌನ್ ಧರಿಸಿ ಸರಳ ಲುಕ್‌ನಲ್ಲೇ ಆಕರ್ಷಕವಾಗಿ ಕಾಣುತ್ತಾರೆ. ಮುಂದಿನ ತಿಂಗಳೇ ಎರಡನೇ ಮಗುವಿಗೆ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಪ್ರಣೀತಾ. ಮೊದಲ ಮಗು ಜನಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಸಿನಿಮಾ/ಮಾಡೆಲಿಂಗ್/ಜಾಹೀರಾತುಗಳಲ್ಲಿ ಪ್ರಣೀತಾ ಸಕ್ರಿಯರಾಗಿದ್ದರು. ಇದೀಗ ಎರಡನೇ ಮಗು ಜನಿಸಿದ ಬಳಿಕವೂ ಅದೇ ಧ್ಯೇಯ ಹೊಂದಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಪ್ರಣೀತಾ ಸದಾ ಸುದ್ದಿಯಲ್ಲಿರ್ತಾರೆ.

ಅಂದಹಾಗೆ, 2021ರಲ್ಲಿ ಉದ್ಯಮಿ ನಿತಿನ್ ರಾಜು ಅವರನ್ನು ಪ್ರಣಿತಾ ಮದುವೆಯಾದರು. 2022ರಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಆ ಮಗುವಿಗೆ ಆರ್ನಾ ಎಂಬ ಮುದ್ದಾದ ಹೆಸರಿಟ್ಟಿದ್ದಾರೆ. ಈಗ ಮಗಳಿಗೆ 2 ವರ್ಷ ತುಂಬಿದೆ.