ಬಂಟ್ವಾಳ : ಕೆಳಗಿನ ವಗ್ಗದಿಂದ ಮಾಂಗಜೆವರೆಗೆ ರಸ್ತೆಯ ಇಕ್ಕಡೆಗಳಲ್ಲಿ ಗಿಡ ಗಂಟೆಗಳು ಬೆಳೆದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆವಾಗುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವೀಪತು ನಿರ್ವಹಣಾ ಘಟಕ ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನದ ಮೂಲಕ ಬೆಳೆದಂತ ಗಿಡ ಬಲ್ಲೆಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಕಾವಳಪಡುರು ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ, ಶೌರ್ಯ ವೀಪತು ನಿರ್ವಹಣಾ ಘಟಕ ಪ್ರತಿನಿಧಿ ಪ್ರವೀಣ, ಸಂಯೋಜಕಿ ರೇಖಾ ಪಿ, ವಗ್ಗ ವಲಯ ಮೇಲ್ವಿಚಾರಕರಾಕಿ ಸವಿತಾ, , ಶೌರ್ಯ ಘಟಕದ ಸದಸ್ಯರುಗಳಾದ ಸಂಪತ್ ಶೆಟ್ಟಿ, ಮಹಾಬಲ ರೈ ನಾರಾಯಣಶೆಟ್ಟಿ, ಲಕ್ಷ್ಮಣ ,ಅಶೋಕ, ನಾರಾಯಣ ಪೂಜಾರಿ , ಆನಂದ, ವಸಂತ, ಪವಿತ್ರ , ಜಯಮಾಲಾ, ಪ್ರಿಯಾಂಕ, ರೋಹಿತ್ , ಪವನ್, ದಿನೇಶ್,ಸೇವಾ ಪ್ರತಿನಿಧಿಗಳಾದ ರಜನಿ, ಸುಮಿತ್ರ ಮೊದಲಾದವರು ಭಾಗವಹಿಸಿದ್ದರು.