ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ- ಕಹಳೆ ನ್ಯೂಸ್
ಶ್ರೀ ಕೃಷ್ಣನದು ಜಗತ್ತೇ ವಂದಿಸುವ0ತಹ ವ್ಯಕ್ತಿತ್ವ. ಮಗುವಾಗಿ, ಸ್ನೇಹಿತನಾಗಿ, ಭಗವದ್ಗೀತೆಯ ಬೋಧಕನಾಗಿ ಅವನು ನಮ್ಮೆಲ್ಲರಿಗೂ ಮಾರ್ಗದರ್ಶಕನಾಗಿದ್ದಾನೆ ಎಂದು ಕೇಂದ್ರ ಸ್ಥಾನಿಯ ಉಪತಹಶೀಲ್ದಾರರಾದ ನರೇಂದ್ರನಾಥ ಮಿತ್ತೂರು ಹೇಳಿದರು.
ಸೋಮವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಚರಿಸಲ್ಪಟ್ಟ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಬಂಟ್ವಾಳ ತಾಲೂಕು ಯಾದವ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ರವರು ಅವತಾರ ಪುರುಷರು ಜನಿಸಿದಾಗ ಮನುಕುಲವನ್ನೇ ರಕ್ಷಣೆ ಮಾಡುತ್ತಾರೆ. ಆದರೆ ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು. ದೈವತ್ವಕ್ಕೆ ಸಂಪೂರ್ಣ ಶರಣಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಉಪತಹಶೀಲ್ದಾರರಾದ ರಾಜೇಶ್ ನಾಯ್ಕ್ ಎನ್. ಎಮ್, ದಿವಾಕರ ಮುಗುಲ್ಯ, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ದ ಕ ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷರಾದ ಎಸ್ ಗೋಪಾಲ್, ದ ಕ ಜಿಲ್ಲಾ ಯಾದವ ಸಂಘದ ಕೋಶಾಧಿಕಾರಿ ಚಂದ್ರಶೇಖರ್ ಅಳಿಕೆ, ತಾಲೂಕು ಯಾದವ ಸಂಘದ ಪ್ರತಿನಿಧಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಯವರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.