ನರಿಕೊಂಬು ಯುವಕ ಮಂಡಲ( ರಿ) ನರಿಕೊಂಬು ಮೊಗರ್ನಾಡು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 56ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ- ಕಹಳೆ ನ್ಯೂಸ್
ಬಂಟ್ವಾಳ : ಹಬ್ಬ ಆಚರಣೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಧಾರ್ಮಿಕ ಪರಂಪರೆಯನ್ನು ಮುಂದುವರಿಸುತ್ತಾ ಹೋಗುವಂತಾಗಬೇಕು, ಭಗವದ್ಗೀತೆಯ ಸಂದೇಶ ಹಾಗೂ ಅದರ ಅರ್ಥವನ್ನು ಮಕ್ಕಳಿಗೆ ತಿಳಿಸುವ ಅಗತ್ಯತೆ ಇದೆ ಎಂದು ಶ್ರೀ ಭದ್ರಕಾಳಿ ದೇವಸ್ಥಾನ ಏರಮಲೆ ನರಿ ಕೊಂಬು ಇಲ್ಲಿನ ಪ್ರಧಾನ ಅರ್ಚಕರಾದ ಕೇಶವಶಾಂತಿ ನಾಟಿ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೆವಸ್ಥಾನದ ವಠಾರದಲ್ಲಿ ನರಿಕೊಂಬು ಯುವಕ ಮಂಡಲ( ರಿ) ನರಿ ಕೊಂಬು ಮೊಗರ್ನಾಡು ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 56 ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಚುಟುಕು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಮೊಗರ್ನಾಡು ಇದರ ಆಡಳಿತ ಮುಕ್ತೇಸರ ವೇದಮೂರ್ತಿ ಜನಾರ್ಧನ್ ಭಟ್ ಇವರನ್ನು ಯುವಕಮಂಡಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನವಜೀವನ ಗೇಮ್ಸ್ ಕ್ಲಬ್ ಕುರ್ಚಿಪಳ್ಳ ಹಾಗೂ ಸಾರ್ವಜನಿಕರ ಸಹಕಾರದಿಂದ ಶ್ರೀ ಕೃಷ್ಣದೇವರ ವೈಭವದ ಮೆರವಣಿಗೆ ಮಾಡಲಾಯಿತು. ಪುಟಾಣಿ ಮಕ್ಕಳು ಶ್ರೀ ಕೃಷ್ಣ ವೇಶ ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ವೇದಿಕೆಯಲ್ಲಿ ಶ್ರೀ ಕೃಷ್ಣನ ತೊಟ್ಟಿಲು ತೂಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶೇಡಿಗುರಿ ಶಿಶುಮಂದಿರ, ದೊಂಪದಬಲಿ ಅಂಗನವಾಡಿ ಪುಟಾಣಿಗಳಿಂದ, ಹಾಗೂ ನಿಶಾನೆ ಡ್ಯಾನ್ಸ್ ಗ್ರೂಪ್ ನರಿಕೊಂಬು ಇವರಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ಜರಗಿತು. ಮೊಸರು ಕುಡಿಕೆ ಉತ್ಸವ ನಿಮಿತ್ತ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ 1ನೇ ತರಗತಿಯಿಂದ 7ನೇ ತರಗತಿ ತನಕದ ನರಿಕೊಂಬು ಶಾಲಾ ಮಕ್ಕಳನ್ನು ಗೌರವಿಸಲಾಯಿತು. ಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಜಾರುಮರ ಹತ್ತುವ ಸ್ಪರ್ಧೆ ನಡೆಸಿ ವಿಜೇತರಾದ ರಮೇಶ್ ರವರನ್ನು ಗೌರವಿಸಿ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಬಂಟ್ವಾಳ ತಾಲೂಕು ಗಾಣಿಗರ ಸಂಘ(ರಿ ) ಪಾಣೆಮಂಗಳೂರು ಅಧ್ಯಕ್ಷ ರಘು ಸಫಲ್ಯ, ಶ್ರೀ ದುರ್ಗಾ ಫ್ಯಾಬ್ರಿ ಕೇಶನ್ ವರ್ಕ್ಸ್ ಮೊಗರ್ನಾಡು ಮಾಲಕ ಉಮೇಶ್ ಬೋಳಂತೂರು, ಪಾಣೆಮಂಗಳೂರು ಜೆ ಎಲ್ ಆಚಾರ್ಯ ಜುವೆಲರ್ಸ್ ನ ಮಾಲಕ ಬಿಜು ಆಚಾರ್ಯ, ಹಲ್ಲಿಮನೆ ಉಪ್ಪಿನಕಾಯಿ ಶಂಬೂರು ಮಾಲಕ ಹೇಮಚಂದ್ರ, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವರ್ಗದ ಅಧ್ಯಕ್ಷ ಉಮೇಶ್ ನೆಲ್ಲಿಗುಡ್ಡೆ, ಜಾನಕಿ ಕಂಟ್ರಕ್ಷನ್ ಶೇಡಿಗುರಿ ಇದರ ಮಾಲಕ ಕೃಷ್ಣ ಕುಲಾಲ್, ನರಿ ಕೊಂಬು ಯುವಕ ಮಂಡಲದ ಗೌರವ ಅಧ್ಯಕ್ಷರುಗಳಾದ ಕೇಶವ ಪಿ ಎಚ್, ಪ್ರಕಾಶ್ ಕುಮಾರ್, ಅಧ್ಯಕ್ಷ ಮೋಹನ್ ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದರ್ಶನ್ ಕುಲಾಲ್ ಸ್ವಾಗತಿಸಿ, ಪ್ರವೀಣ್ ವಂದಿಸಿ, ಅರ್ಚಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು