Sunday, January 19, 2025
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ 2024-25 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ- ಕಹಳೆ ನ್ಯೂಸ್

“ ಮಕ್ಕಳ ಶಿಸ್ತು ಬದ್ಧ ನಡವಳಿಕೆಯಲ್ಲಿ ಪೋಷಕರ ಪಾತ್ರ ಹಿರಿದಾದುದು. ತಪ್ಪಾದಾಗ ತಿದ್ದುವ ,ಸೋತಾಗ ಸ್ಪೂರ್ತಿಯಾಗುವ ಆತ್ಮೀಯ ಗೆಳೆಯರು ನಾವಾಗಬೇಕು. ಆಡಳಿತ ಮಂಡಳಿ ,ಶಿಕ್ಷಕ ವರ್ಗದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಪೋಷಕರ ಸ್ಪಂದನೆ ಅತೀ ಅಗತ್ಯ ”ಎಂದು ಪುತ್ತೂರಿನ ಮಕ್ಕಳ ತಜ್ಞರು ಮತ್ತು ಸೈಕೊತೆರಪಿಸ್ಟ್ ಆದ ಡಾ. ಸುಲೇಖ ಪಿ.ಎಮ್ ರವರು ಹೇಳಿದರು.

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ 2024-25 ನೇ ಸಾಲಿನ ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯಲ್ಲಿ ಪೋಷಕರಿಗಾಗಿ ಆಯೋಜಿಸಿದ ಹದಿಹರೆಯದ ಮಕ್ಕಳಲ್ಲಿನ ಸಮಸ್ಯೆಗಳು ಎಂಬ ವಿಚಾರದ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಗತ್ಯ. ಹದಿಹರೆಯದಲ್ಲಿ ಹುಡುಗ ಹುಡುಗಿಯರು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಸಮಯದಲ್ಲಿ ವೈಜ್ಞಾನಿಕವಾಗಿ ದೇಹದಲ್ಲಿ ಕೆಲವೊಂದು ಸಹಜ ಬದಲಾವಣೆಗಳಾಗುತ್ತವೆ. ಹರೆಯದಲ್ಲಿ ಜವಾಬ್ದಾರಿ ಅರಿತು ನಡೆದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು.ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲಕರು ತಮ್ಮ ಮಕ್ಕಳೊಂದಿಗೆ ಮಾತನಾಡಬೇಕು ಏಕೆಂದರೆ ಹದಿಹರೆಯದವರು ಮತ್ತು ಹದಿಹರೆಯದವರಿಗೆ ಕುಟುಂಬದ ಬೆಂಬಲವು ಮುಖ್ಯವಾದ ಏಕೈಕ ವಿಷಯವಾಗಿದೆ. ಪೆÇೀಷಕರು ಅವರ ಮಾತನ್ನು ಯಾವುದೇ ನಿರ್ಣಯವಿಲ್ಲದೆ ಆಲಿಸಿದರೆ ಮತ್ತು ಅವರಿಗೆ ಸ್ವೀಕಾರ, ಪ್ರೀತಿ, ಗೌರವ ಮತ್ತು ಗುಣಮಟ್ಟದ ಸಮಯದ ಭಾವನಾತ್ಮಕ ಸಂಪನ್ಮೂಲಗಳನ್ನು ಒದಗಿಸಿದರೆ, ಮಕ್ಕಳು ಈ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಬಹುದು. ಎಂದು ಹೇಳಿದರು.

ಹದಿಹರೆಯದ ಸಮಯದಲ್ಲಿ ಎಲ್ಲರಲ್ಲೂ ವಿಭಿನ್ನ ಭಾವನೆಗಳು ಮೂಡುತ್ತವೆ. ಬಹಳಷ್ಟು ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಗೊಂದಲಗಳು ಏರ್ಪಡುತ್ತವೆ. ಇಂತಹ ಸಮಯದಲ್ಲಿ ಪೆÇೀಷಕರೊಂದಿಗೆ, ಶಿಕ್ಷಕರೊಂದಿಗೆ ಅಥವಾ ಕುಟುಂಬದ ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಬೇಕು. ತಮ್ಮ ಜತೆ ಯಾರೇ ಅನುಚಿತವಾಗಿ ವರ್ತಿಸಿದರೂ ಧೈರ್ಯದಿಂದ ಪ್ರತಿಭಟಿಸುವ ಸಾಮಥ್ರ್ಯವನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿರಬೇಕು. ನಿಯಮಿತ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು, ಅವರ ಸಮಸ್ಯೆ ಪರಿಹರಿಸುವ ಕೌಶಲ್ಯ ಮತ್ತು ಪರಸ್ಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು, ಮತ್ತು ಭಾವನೆಗಳನ್ನು ಹೇಗೆ ನಿರ್ವಹಿಸಬೇಕು ಇತ್ಯಾದಿಗಳನ್ನು ಕಲಿಯಬೇಕು. ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದ ಸತೀಶ್ ಕಲ್ಲೂರಾಯ ಇವರು ಹೊಸದಾಗಿ ಚುನಾಯಿತರಾದ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳಿಗೆ ಶುಭ ಹಾರೈಸುತ್ತಾ “ಕಳೆದ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರಬೇಕು.ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಪೋಷಕರು ತಮ್ಮ ಬೆಂಬಲವನ್ನು ಸಲಹೆಗಳನ್ನು ಮತ್ತು ಸಹಕಾರವನ್ನೂ ನೀಡುತ್ತಿರಬೇಕು”ಎಂದು ಹೇಳಿದರು.

ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯರವರು ಮಾತನಾಡುತ್ತಾ “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣ ಶಿಕ್ಷಕರು ಮತ್ತು ಪೋಷಕರು.ಮಕ್ಕಳಲ್ಲಿ ಸತ್ಭಾವನೆಯನ್ನು ತುಂಬಿ ಒಬ್ಬ ಸತ್ಪ್ರಜೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದು. ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ಪೋಷಕರ ಪ್ರೋತ್ಸಾಹ ಇನ್ನು ಮುಂದೆಯೂ ಇರಲಿ.”ಎಂದು ಹೇಳಿದರು.

ಪ್ರಸಕ್ತ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ದೀಪಾ ನಾಯಕ್ ಇವರು ವಿದ್ಯಾರ್ಥಿಗಳ ಅಭಿವೃದ್ಧಿಯ ಬಗ್ಗೆ ಹಾಗೂ ಸಂಸ್ಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಎಲ್ಲಾ ಪೋಷಕರ ಪರವಾಗಿ ಮಾತನಾಡಿ ವ್ಯಕ್ತಪಡಿಸಿದರು.ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗಾಗಿ ತಮ್ಮೆಲ್ಲರ ಸಹಕಾರ ಇರುವುದಾಗಿ ಭರವಸೆ ನೀಡಿದರು.

2024-25 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ರಚನೆ ಪೋಷಕರ ಮತ್ತು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು.ಅಧ್ಯಕ್ಷರಾಗಿ ದೀಪಾ ನಾಯಕ್, ಉಪಾಧ್ಯಕ್ಷರಾಗಿ ಶ್ರೀಮತಿ ಕಾಂತಿ ಶ್ಯಾಮ, ತಿಲಕ್ ರೈ ಕೆ., ಅಶ್ವಿನಿಕೃಷ್ಣ ಮುಳಿಯ, ಹಾಗೆಯೇ ಮಕ್ಕಳ ರಕ್ಷಣಾ ಅಧಿಕಾರಿಯಾಗಿ ಶ್ರೀಮತಿ ಶಶಿಕಲಾ ಅರ್ತಿಕಜೆ ಮತ್ತು ಸದಸ್ಯರಾಗಿ ಗಂಗಾಧರ, ಹರೀಶಾ, ಡಾ. ಸುಧೀರ್ ಟಿ., ಪದ್ಮನಾಭ ಗೌಡ, ಹರಿಶ್ ಪಿ., ಕೆ. ಮಹೇಂದ್ರ ಕುಮಾರ್, ರಮೇಶ್ ನಾಯಕ್, ನಾಗರತ್ನ ಎನ್, ವಸಂತ ಪೂಜಾರಿ, ಜಯಂತ ಗೌಡ, ಶಶಿಧರಾ ಸಿ., ಗೋಪಾಲ ಜಿ., ಭವ್ಯ ಯು., ಶಶಿಕಲಾ ಎಮ್, ರೂಪಾ ಜೆ. ರೈ, ಬಿ. ಪದ್ಮನಾಭ, ಶ್ರೀಮತಿ ಚೈತ್ರ ರೈ.,ಶ್ರೀಮತಿ ಸುಭಾಶಿನಿ, ಶ್ರೀಮತಿ ಗಾಯತ್ರಿ, ಶ್ರೀಮತಿ ನಮಿತಾ, ಗಣೇಶ್ ಆಚಾರ್, ಶ್ರೀಮತಿ ಸುಮತಿ ಪಿ., ಪ್ರವೀಣಾ ಸರಳಾಯ, ಶ್ರೀಮತಿ ಗುಲಾಬಿ ಆಯ್ಕೆಗೊಂಡರು.

ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ. ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ “ಪೋಷಕರು ಸಂಸ್ಥೆಯ ಅಭಿವೃದ್ಧಿಗೆ ರಕ್ಷಕ-ಶಿಕ್ಷಕ ಸಂಘದೊಂದಿಗೆ ಕೈಜೋಡಿಸಬೇಕು” ಎಂದು ಹೇಳಿದರು. ಸಂಸ್ಥೆಯ ಚಟುವಟಿಕೆಗಳ ಕುರಿತಾದ ಮಾಹಿತಿಯನ್ನು ಪೋಷಕರ ಮುಂದೆ ಇರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿಯಾದ ಶ್ರೀಮತಿ ರೇಣುಕಾ ವಂದಿಸಿದರು.