Sunday, January 19, 2025
ಕೇರಳಕ್ರೈಮ್ಸಿನಿಮಾಸುದ್ದಿ

”ನನ್ನ ಮೊದಲ ಚಿತ್ರಕ್ಕೆ ಬಿಕಿನಿ ಹಾಕಿದ್ದೆ,ಆಗ ಮೇಕಪ್‌ಮ್ಯಾನ್ ಎಲ್ಲೆಲ್ಲಿ-ಹೇಗೆಲ್ಲ ಮುಟ್ಟಿದ್ದ ಅಂತ ನನಗೆ ಗೊತ್ತು” – ಸೆ* ಬಾಂಬ್ ಎಸೆದಿದ್ದಾರೆ ಶಕೀಲಾ..! – ಕಹಳೆ ನ್ಯೂಸ್

90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೀಲಿ ತಾರೆಯಾಗಿ ಜನಮನ ಗೆದ್ದವರು ಶಕೀಲಾ. ಒಂದು ಲೆಕ್ಕಾಚಾರದ ಪ್ರಕಾರ ಮಲಯಾಳಂ ಚಿತ್ರರಂಗದಲ್ಲಿ ಶಕೀಲಾ ಅಭಿನಯದ ಹೆಚ್ಚು ಕಡಿಮೆ ನೂರು ಪೋರ್ನ್ ಚಿತ್ರಗಳು ಆ ಕಾಲದಲ್ಲಿ ತಯಾರಾಗಿದ್ದವು. ಇಷ್ಟೇ ಅಲ್ಲ ಈ ಚಿತ್ರಗಳು ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋಗಳಾದ ಮುಮ್ಮೂಟಿ ಮತ್ತು ಮೋಹನ್ ಲಾಲ್ ಅವರ ಚಿತ್ರಗಳಿಗೆ ಸೆಡ್ಡು ಹೊಡೆದು ಗಳಿಕೆಯಲ್ಲಿ ಹಿಂದಿಕ್ಕುತ್ತಿದ್ದವು ಎಂಬ ಉಲ್ಲೇಖ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಆ ನಂತರ ವಯಸ್ಕರ ಚಿತ್ರಗಳಿಂದ ಅಂತರ ಕಾಪಾಡಿಕೊಂಡು ಬಂದ ಶಕೀಲಾ, ಮುಖ್ಯವಾಹಿನಿ ಚಿತ್ರಗಳತ್ತ ಹೊರಳಿದರು. ಇದಕ್ಕೆ ಪೂರಕವಾಗಿ ‘ಬಾಸ್ ಎಂಗಿರಾ ಭಾಸ್ಕರನ್’ .. ‘ಸಕಲಕಲಾ ವಲ್ಲಭನ್’ ನಂತಹ ತಮಿಳು ಚಿತ್ರಗಳಲ್ಲಿನ ಇವರ ಅಭಿನಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇಂಥಾ ಶಕೀಲಾ ಸದ್ಯಕ್ಕೆ ಮಲಯಾಳಂ ಚಿತ್ರರಂಗದ ಕಾಮಕಾಂಡದ ಕುರಿತು ಮಾತನಾಡಿದ್ದಾರೆ. ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸಮಸ್ಯೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂದರ್ಶನವೊಂದರಲ್ಲಿ ಮಾತನಾಡಿರುವ ಶಕೀಲಾ, ಮಲಯಾಳಂ ಚಿತ್ರರಂಗದಲ್ಲಿ ಸಮಿತಿ ರಚನೆಯಾದಂತೆ ಅಕ್ಕ-ಪಕ್ಕದ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೂಡ ಆಯೋಗ ರಚನೆಯಾಗಬೇಕು. ಯಾಕೆಂದರೆ ಮಲಯಾಳಂ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗಲ್ಲಿನ ವ್ಯವಸ್ಥೆ ಅತೀ ಹೆಚ್ಚು ಹಡಾಲೆದ್ದಿದೆ ಎಂದಿದ್ದಾರೆ.

ಇನ್ನು ತೆಲುಗು ಚಿತ್ರರಂಗದಲ್ಲಿ ಸ್ಟಾರ್‌ ಹೀರೋಗಳೇ ನೇರವಾಗಿ ಮಂಚಕ್ಕೆ ಕರೆಯುತ್ತಾರೆ ಎಂದಿರುವ ಶಕೀಲಾ, ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಒಪ್ಪಂದದಲ್ಲಿಯೇ ನಮೂದಿಸಿರಲಾಗಿರುತ್ತೆ ಎಂದಿದ್ದಾರೆ. ಇಷ್ಟೇ ಅಲ್ಲ ಮುಂದಿನ ಚಿತ್ರಕ್ಕೆ ಕರೆಯುತ್ತೇವೆ ಎಂದು ಹೇಳಿ ಅಲ್ಲಿನ ಮ್ಯಾನೇಜರ್‌ಗಳು ಕೂಡ ನಮ್ಮ ಜೊತೆ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ತೀರಾ ಎಂದು ಕೇಳುತ್ತಾರೆ ಎಂದು ಹೇಳುವ ಮೂಲಕ ತೆಲುಗು ಚಿತ್ರರಂಗದ ಮೇಲೆ ಸೆ* ಬಾಂಬ್ ಎಸೆದಿದ್ದಾರೆ ಶಕೀಲಾ.

ಮುಂದುವರೆದು ಹಿಂದಿ ಚಿತ್ರರಂಗದಲ್ಲಿ ಕೂಡ ಈ ಸಮಸ್ಯೆ ಇದೆ ಎಂದಿರುವ ಶಕೀಲಾ, ಬಾಲಿವುಡ್‌ ಗೆ ಹೋದ ತಕ್ಷಣ ಅಲ್ಲಿ ಎಲ್ಲರು ಸ್ನೇಹಿತರಾಗುತ್ತಾರೆ ಹೀಗಾಗಿ ಅವರಿಗೆ ಅದು ತೊಂದರೆಯೆಂಬ ಭಾವನೆ ಬರಲ್ಲ ಎಂದಿದ್ದಾರೆ. ಕೆಲವರು ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯವನ್ನು ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಆ ನೋವನ್ನು ನುಂಗಿ ಮುಂದುವರೆಯುವ ಪ್ರಯತ್ನ ಮಾಡುತ್ತಾರೆ ಎಂದಿರುವ ಶಕೀಲಾ, ಯಾರಾದರೂ ಒತ್ತಾಯಪೂರ್ವಕವಾಗಿ ಮಂಚಕ್ಕೆ ಕರೆದರೆ ಆಗ ಅವರಿಗೆ ನಾವು ಖಡಕ್ ಎಚ್ಚರಿಕೆಯನ್ನು ಕೊಡುವುದನ್ನು ಕಲಿಯಬೇಕಾಗಿದೆ ಎಂದಿದ್ದಾರೆ.

ಇನ್ನೂ ಹೇಮಾ ವರದಿಯಲ್ಲಿ ಉಲ್ಲೇಖವಾದ ವಿಚಾರವನ್ನು ಒಪ್ಪಿಕೊಂಡಿರುವ ಶಕೀಲಾ, ಆ ವರದಿಯಲ್ಲಿರುವಂತೆ ಎಣ್ಣೆ ಹೊಡೆದು ನಾಯಕಿಯ ರೂಮ್‌ಗೆ ನುಗ್ಗುವ ಸಂಪ್ರದಾಯ ಮಲಯಾಳಂನಲ್ಲಿದೆ ಎಂದಿದ್ದಾರೆ. ನನ್ನ ಜೊತೆ ರೂಪಶ್ರೀ ಎಂಬ ನಟಿ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದರು, ಆ ಸಮಯದಲ್ಲಿ ಪಾನಮತ್ತಾಗಿ ಬಂದ ನಾಲ್ಕು ಜನ ರೂಪಶ್ರೀಯ ಕೋಣೆಗೆ ಬಲವಂತವಾಗಿ ಹೋಗಲು ಪ್ರಯತ್ನ ಮಾಡಿದ್ದರು ಎಂದು ಹಳೆಯ ಘಟನೆಯನ್ನು ಶಕೀಲಾ ಮೆಲುಕು ಹಾಕಿದ್ದಾರೆ. ಆ ನಂತರ ನಾನು ಅಲ್ಲಿಗೆ ಹೋಗಿ ಆ ನಾಲ್ಕು ಜನರನ್ನು ಬೈದು ಕಳಿಸಿದ್ದೆ ಎಂದಿದ್ದಾರೆ.

ಸಂದರ್ಶನದಲ್ಲಿ ತಮಗಾದ ಅನುಭವವನ್ನೂ ಹಂಚಿಕೊಂಡಿರುವ ಶಕೀಲಾ, ಮಲಯಾಳಂ ಚಿತ್ರರಂಗವನ್ನೇ ದ್ವೇಷಿಸುವಷ್ಟು ನನಗೆ ಹಿಂಸೆ ನೀಡಿದ್ದರು ಎಂದಿದ್ದಾರೆ. ನನ್ನ ಮೊದಲ ಚಿತ್ರಕ್ಕೆ ನಾನು ಬಿಕಿನಿ ಹಾಕಿದ್ದೆ ಆಗ ನನಗೆ ಮೇಕಪ್ ಮಾಡಲು ಬಂದವನು ಎಲ್ಲೆಲ್ಲಿ ಮತ್ತು ಹೇಗೆಲ್ಲ ಮುಟ್ಟಿದ್ದ ಅನ್ನುವುದು ನನಗೆ ಮಾತ್ರ ಗೊತ್ತು ಎಂದು ಹೇಳಿರುವ ಶಕೀಲಾ, ‘ಗೋಲ್‌ಮಾಲ್’ ಚಿತ್ರದಲ್ಲಿ ಆಕ್ಟ್ ಮಾಡುವಾಗ ವಸ್ತ್ರವಿನ್ಯಾಸಕರೊಬ್ಬರು ನನ್ನ ಮನೆಗೆ ಬಂದು ಅಳತೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಅವರು ಕೂಡ ನನ್ನ ಜೊತೆ ತೀರಾ ಅಸಭ್ಯವಾಗಿ ವರ್ತಿಸಿದ್ದರು ಎಂದಿರುವ ಶಕೀಲಾ ಮಲಯಾಳಂ ಚಿತ್ರರಂಗದಲ್ಲಿ ಹಲವು ಕೊಳಕುಗಳಿವೆ ಎಂದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಪುರುಷರದ್ದೇ ಪಾರುಪಥ್ಯ ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಶಕೀಲಾ.