Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ಕಚೇರಿಯಲ್ಲಿ ಕುತೂಹಲ ಕೆರಳಿಸಿದ ರಹಸ್ಯ ಸಭೆ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಗುರುವಾರ ರಹಸ್ಯ ಸಭೆ ನಡೆದಿದ್ದು ಕುತೂಹಲ ಮೂಡಿಸಿದೆ.

ಬಿಜೆಪಿ ಪಾಳಯದಲ್ಲಿ ಕಳೆದ ಕೆಲ ದಿನಗಳಿಂದ ಆಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಸಂಸದ ಚೌಟ ಅವರು ದಿಢೀರ್ ಪಕ್ಷದ ಕಚೇರಿಗೆ ಆಗಮಿಸಿದ್ದರು. ಈ ಬಗ್ಗೆ ಬಿಜೆಪಿಯ ಮಾಧ್ಯಮ ಗ್ರೂಪ್ ನಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲಾಯಿತು. ಹೀಗಾಗಿ ಪತ್ರಕರ್ತರು ಆಗಮಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆ ಆರಂಭಗೊಂಡ ಬೆನ್ನಲ್ಲೇ ಸಂಸದ ಬ್ರಿಜೇಶ್ ಚೌಟ ಅವರು ಪತ್ರಕರ್ತರನ್ನು ಗಮನಿಸಿ ಹೊರ ಹೋಗುವಂತೆ ಸೂಚಿಸಿದರು. ಪತ್ರಕರ್ತರು ಹೊರ ಹೋದ ಬಳಿಕ ಸಂಸದ ಚೌಟ ಭಾಷಣ ಆರಂಭಿಸಿದರು. ಸಭೆಯಲ್ಲಿ  ಬಿಜೆಪಿ ಮುಖಂಡರು ಉಪಸ್ಥಿತರಿದ್ದು ರಹಸ್ಯ ಸಭೆ ಕುತೂಹಲ ಮೂಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು