ಸೆ. 1 ರಂದು ನಡೆಯಲಿದೆ ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ 2023-24ನೇ ಸಾಲಿನ ಮಹಾಸಭೆ- ಕಹಳೆ ನ್ಯೂಸ್
ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ 2023-24ನೇ ಸಾಲಿನ ಮಹಾಸಭೆ ಸೆ. 1 ರಂದು ಆದಿತ್ಯವಾರ ಬಿ.ಸಿ. ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಸುರೇಶ್ ಕುಲಾಲ್ ಅವರು ತಿಳಿಸಿದರು. ಅವರು ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂಘವು 2023-24ನೇ ಸಾಲಿನಲ್ಲಿ ರೂ. 982.54 ಕೋಟಿ ವ್ಯವಹಾರ ನಡೆಸಿ ರೂ. 5.71 ಕೋಟಿ ಲಾಭ ಗಳಿಸಿರುತ್ತದೆ ಎಂದು ತಿಳಿಸಿದರು. ಸಂಘದಲ್ಲಿ 8660 ಸದಸ್ಯರಿದ್ದು ಪಾಲು ಬಂಡವಾಳ ರೂ. 7.87 ಕೋಟಿ, ಠೇವಣಾತಿಗಳು ರೂ. 214.26 ಕೋಟಿ. ನಿಧಿಗಳು 15.68 ಕೋಟಿ, ವಿನಿಯೋಗಗಳು 59.82 ಕೋಟಿ, ಸಾಲಗಳು ರೂ. 192.78 ಕೋಟಿ, ವಸೂಲಾತಿ ಶೇಕಡ 95.02 ಆಗಿರುತ್ತದೆ. . ಸಂಘದ ದುಡಿಯುವ ಬಂಡವಾಳ ರೂ. 239.90 ಕೋಟಿ ಆಗಿರುತ್ತದೆ. ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿ ಇರುತ್ತದೆ.
ಸಹಕಾರಿಯು ಮುಂದಿನ ದಿನಗಳಲ್ಲಿ ಇನ್ನು ನಾಲ್ಕು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತೀರ್ಮಾನಿಸಿರುತ್ತದೆ. ಸಹಕಾರಿಯಲ್ಲಿ 69 ಖಾಯಂ ಸಿಬ್ಬಂದಿಗಳು ಹಾಗೂ ಇತರ ಠೇವಣಾತಿ ಸಂಗ್ರಾಹಕರಾಗಿ 47 ಮಂದಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆ ಆಡಳಿತ ಮಂಡಳಿಯದ್ದಾಗಿರುತ್ತದೆ. ಗ್ರಾಹಕರ ಸೇವೆಯ ಅನುಕೂಲಕ್ಕಾಗಿ ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಆನ್‌ಲೈನ್ ಮುಖಾಂತರ ಸೇವೆಯನ್ನು ಕೊಡುವ ಬಗ್ಗೆ ಆಡಳಿತ ಮಂಡಳಿ ಯೋಜನೆ ಹಾಕಿಕೊಂಡಿರುತ್ತದೆ. ಸಹಕಾರಿಯ ವತಿಯಿಂದ ಉನ್ನತ ವ್ಯಾಸಂಗಕ್ಕಾಗಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಉನ್ನತ ವ್ಯಾಸಂಗಕ್ಕಾಗಿ ಸಹಕಾರಿಯಲ್ಲಿ ವಿದ್ಯಾ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರ ಅನೂಕೂಲಕ್ಕಾಗಿ ಸೆಫ್ ಡೆಪಾಸಿಟ್ ಲಾಕರ್, RTGS, NEFT ಮತ್ತುSMS ಸೌಲಭ್ಯವನ್ನು ಕಲ್ಪಿಸಲಾಗಿದೆ. ಇ-ಸ್ಟ್ಯಾಂಪ್ ಸೌಲಭ್ಯವನ್ನು ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಆಳವಡಿಸಲಾಗಿದೆ.
ಸಹಕಾರಿಯಲ್ಲಿ 241 ಅಮೂಲ್ಯ ಸ್ವಸಹಾಯ ಗುಂಪುಗಳು ಇದ್ದು 2207 ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದು ಒಟ್ಟು ರೂ. 83,63,062.80 ಉಳಿತಾಯವನ್ನು ಮಾಡಿರುತ್ತಾರೆ. 2023-24 ನೇ ಸಾಲಿನಲ್ಲಿ ಗುಂಪುಗಳಿಗೆ ರೂ. 1,66,95,000.00 ಸಾಲವನ್ನು ನೀಡಿದ್ದು ರೂ. 1,66,75,687.00 ಮರು ಸಂದಾಯ ಮಾಡಿ ವರ್ಷಾಂತ್ಯಕ್ಕೆ ರೂ. 2,03,34,073.00 ಹೊರಬಾಕಿ ಇರುತ್ತದೆ. ಸಹಕಾರಿಯ ಸಾಮಾನ್ಯ ಕ್ಷೇಮನಿಧಿಯಿಂದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ರೂ. 3,61,000.00 ನ್ನು ನೀಡಲಾಗಿದೆ. ದೇವಸ್ಥಾನ, ದೈವಸ್ಥಾನ ಜೀರ್ಣೋದ್ದಾರದ ಬಗ್ಗೆ ರೂ. 1,98,000.00, ಸಪ್ತಾಹ ಮತ್ತು ಸಂಘ ಸಂಸ್ಥೆಗಳಿಗೆ ರೂ. 3,94,500.00 ಸಹಾಯಧನವನ್ನು ನೀಡಲಾಗಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗಿದೆ.. ರೂ. 10,000.00 ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ರೂ. ಒಂದು ಲಕ್ಷ ಮೊತ್ತದ ಅಪಘಾತ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ನೀಡಲಾಗುತ್ತಿದೆ. ದ.ಕ.ಹಾಗುಉಡುಪಿ ಜಿಲ್ಲೆಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಉತ್ತಮವಾದ ಸೇವೆ ನೀಡುತ್ತಿದೆ ಎಂದು ತಿಳಿಸಿದರು.
ಸಂಘಕ್ಕೆ 2023-24 ನೇ ಸಾಲಿನಲ್ಲಿ ಸಾಧಿಸಿದ ಸರ್ವತೋಮುಖ ಅಭಿವೃದ್ಧಿಯನ್ನು ಪರಿಗಣಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಪದ್ಮನಾಭ ವಿಟ್ಲ, ನಿರ್ದೇಶಕರುಗಳಾದ ವಿಶ್ವನಾಥ, ಎಂ.ವಾಮನ ಟೈಲರ್, ಜನಾರ್ದನ ಬೊಂಡಾಲ, ವಿ.ವಿಜಯಕುಮಾರ್, ಅರುಣ್ ಕುಮಾರ್, ರಮೇಶ್ ಸಾಲ್ಯಾನ್, ಸತೀಶ್, ಸುರೇಶ್ ಎನ್, ರಮೇಶ್ ಸಾಲಿಯಾನ್, ನಾಗೇಶ್ ಬಿ.ಜಯಂತಿ, ವಿದ್ಯಾ, ವಿಜಯಲಕ್ಮೀ, ಜಗನ್ನಿವಾಸ ಗೌಡ, ಕೆ.ಗಣೇಶ್ ಸಮಗಾರ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಮೋಹನ್ ಉಪಸ್ಥಿತರಿದ್ದರು.