Tuesday, January 21, 2025
ದಕ್ಷಿಣ ಕನ್ನಡಪುತ್ತೂರು

ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ ಅಧ್ಯಕ್ಷರಾಗಿ ಗುರುಪ್ರಸಾದ್, ಕಾರ್ಯದರ್ಶಿಯಾಗಿ ಅಶ್ವಿತ್ ರೈ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪುತ್ತೂರಿನ ಇರ್ವೆ ಗ್ರಾಮದ ಗೋಳಿಪದವಿನ ಸುಂದರ ಹಾಗೂ ಸುಂದರಿ ದಂಪತಿ ಪುತ್ರ, ಅಂತಿಮ ಬಿ.ಎ ವಿದ್ಯಾರ್ಥಿ ಗುರುಪ್ರಸಾದ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪೆರ್ನೆಯ ಅಮೈ ನಿವಾಸಿಗಳಾದ ಶಾಂತಾರಾಮ ರೈ ಹಾಗೂ ಸ್ವಾತಿ ದಂಪತಿ ಪುತ್ರ, ದ್ವಿತೀಯ ಬಿ.ಎ ವಿದ್ಯಾರ್ಥಿ ಅಶ್ವಿತ್ ರೈ ಚುನಾಯಿತರಾದರು.

ವಿದ್ಯಾರ್ಥಿ ಪ್ರತಿನಿಧಿಗಳಾಗಿ ದ್ವಿತೀಯ ಬಿ.ಎ ವಿದ್ಯಾರ್ಥಿನಿ, ಬಂಟ್ವಾಳದ ಗೋಳ್ತಮಜಲಿನ ನಾರಾಯಣ ಹಾಗೂ ಸೀತಮ್ಮ ದಂಪತಿ ಪುತ್ರಿ ಅಕ್ಷಿತಾ, ತೃತೀಯ ಬಿ.ಎ ಪ್ರತಿನಿಧಿಯಾಗಿ ದೇಲಂಪಾಡಿಯ ರಮಾನಂದ ಎಂ ಹಾಗೂ ಲೀಲಾವತಿ ದಂಪತಿ ಪುತ್ರಿ ತೃಪ್ತಿ ಎಂ, ದ್ವಿತೀಯ ಬಿ.ಕಾಂ ಪ್ರತಿನಿಧಿಯಾಗಿ ಕಡಬದ ಸುಂಕದಕಟ್ಟೆ ನಿವಾಸಿಗಳಾದ ಭುವನೇಂದ್ರ ಕುಮಾರ್ ಹಾಗೂ ನಿರುಪಮಾ ದಂಪತಿ ಪುತ್ರ ಸಾಕೇತ್, ತೃತೀಯ ಬಿ.ಕಾಂ ಪ್ರತಿನಿಧಿಯಾಗಿ ಪುತ್ತೂರಿನ ಬಿಳಿಯೂರುಕಟ್ಟೆಯ ನಾಗೇಶ ಹಾಗೂ ಹೇಮಾ ದಂಪತಿ ಪುತ್ರಿ ದೀಪಾ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು