Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ.ಕ ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾಯಿಲ ನರಿಕೊಂಬು ಇಲ್ಲಿನ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ -ಕಹಳೆ ನ್ಯೂಸ್

ಬಂಟ್ವಾಳ: ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಇವರ ಕೋರಿಗೆ ಮೇರೆಗೆ ಪ್ರಣವ್ ಫೌಂಡೇಶನ್ ಮತ್ತು ಆರ್ ವಿ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ಬಂಟ್ವಾಳ ತಾಲೂಕಿನ ದ.ಕ ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾಯಿಲ ನರಿಕೊಂಬು ಇಲ್ಲಿನ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರ ಕಿರಣ್ ಅಟ್ಲೂರು, ಉಪಾಧ್ಯಕ್ಷರ ರಾಜೇಶ್ ಕೋಟ್ಯಾನ್ ,ಕಾರ್ಯದರ್ಶಿ ರಾಜೇಶ್ ಮರ್ದೋಳಿ, ಮತ್ತು ಸಂಘದ ಸದಸ್ಯರು ಹಾಗೂ ನಾಯಿಲ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಅರುಣ್ ಬೋರುಗುಡ್ಡೆ, ಶಾಲಾ ಮುಖ್ಯ ಶಿಕ್ಷಕಿ ಅನಿತಾ ಮಾರ್ಗರೇಟ್ ಡಿಸೋಜ, ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು