Friday, September 20, 2024
ಸುದ್ದಿ

ಅಯ್ಯಪ್ಪ ದೇವರೇ ಅಲ್ಲ ಅಂದ್ರು ನಟ ಪ್ರಕಾಶ್ ರೈ..! – ಕಹಳೆ ನ್ಯೂಸ್

ಬೆಂಗಳೂರು: ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಗಲ್ಫ್ ನ ಅಂತರಾಷ್ಟ್ರೀಯ ಪುಸ್ತಕ ಮೇಳೆದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರೈ ಅವರು ಶಬರಿಮಲೆ ದೇವಸ್ಥಾನದ ಕುರಿತು ಮಾತನಾಡುತ್ತಾ, ಹೆಣ್ಣು ಅಂದ್ರೆ ತಾಯಿ, ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಅದೇ ಹೆಣ್ಣಿನಿಂದ ಜನ್ಮ ತಾಳುತ್ತೇವೆ. ಆದರೆ ಅದೇ ಹೆಣ್ಣನ್ನು ಪೂಜೆಯಿಂದ ಹೊರಗಿಡೋದು ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಹೆಣ್ಣು ಮಕ್ಕಳ ಪ್ರಾರ್ಥನೆಗೆ ಅವಕಾಶ ಕೊಡದೇ ಇದ್ದರೇ ಅದು ನನ್ನ ಪಾಲಿಗೆ ಧರ್ಮವೇ ಅಲ್ಲ ಅಂತಾ ಕಿಡಿಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಯಾವ ಭಕ್ತರು ಸ್ತ್ರಿಯರನ್ನು ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲವೋ ಅವರು ಭಕ್ತರೇ ಇಲ್ಲ. ಯಾವ ದೇವರು ಮಹಿಳೆಯನ್ನು ನೋಡೋದಿಲ್ಲವೋ ಅದು ದೇವರೇ ಅಲ್ಲ. ಮಹಿಳೆಯರಿಗೆ ಕೇರಳ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲೇಬೇಕು. ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಅಂತಾ ರೈ ಹೇಳಿದ್ದಾರೆ.

ತಿಂಗಳ ಪೂಜೆ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇಗುಲವು ಇಂದು ತೆರೆಯಲಿದೆ. ಮಂಗಳವಾರ ರಾತ್ರಿ ಮತ್ತೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ಹೀಗಾಗಿ ಕಡಿಮೆ ಅವಧಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಆಗಮಿಸಿಲಿದ್ದಾರೆ. ಕಳೆದ ಬಾರಿಯಂತೆ ಈಗಲೂ ಸಮಸ್ಯೆ ಪರಿಸ್ಥಿತಿ ಉದ್ವಿಗ್ನಗೊಳ್ಳಬಾರದು ಅಂತಾ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಭಾರೀ ಭದ್ರತೆಗೆ ಮುಂದಾಗಿದ್ದಾರೆ.

ಶಬರಿಮಲೆ ಜಾಗರಣೆ ಸ್ಥಳದಲ್ಲಿ ಹಾಗೂ ಸಮೀಪದ ಸ್ಥಳಗಳಲ್ಲಿ 100 ಮಹಿಳಾ ಪೊಲೀಸ್ ಸೇರಿದಂತೆ 1,500 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜೊತೆಗೆ 20 ಜನರ ಕಮಾಂಡೋ ತಂಡವನ್ನು ಸನ್ನಿಧಾನಂ, ನಿಲಕಲ್ ಮತ್ತು ಪಂಪಾ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಭಕ್ತಾಧಿಗಳನ್ನು ತಪಾಸಣೆ ಮಾಡಲು ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದೇಗುಲದ ಬಳಿ ಭದ್ರತೆ ಒದಗಿಸಲಾಗಿದೆ. ಅಯ್ಯಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಲು ಪರವಾಣಿಗೆ ಪತ್ರ ಕಡ್ಡಾಯವಾಗಿದೆ. ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಯ್ಯಪ್ಪನಿಗೆ ‘ಶ್ರೀ ಚಿತಿರ ಅಟ್ಟಾ ತಿರುನಾಳ್’ ವಿಶೇಷ ಪೂಜೆ ಮಂಗಳವಾರ ನಡೆಯಲಿದೆ. ಪೂಜೆಯ ವೇಳೆ ಭಕ್ತರಿಗೆ ದರ್ಶನದ ಅವಕಾಶ ನೀಡಲಾಗುತ್ತದೆ. ನಂತರ ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಅಂತ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.