Friday, April 11, 2025
ಉಡುಪಿಕಾರ್ಕಳರಾಜ್ಯಸುದ್ದಿ

ಹಿಂದೂ ಹೆಣ್ಣು ಮಕ್ಕಳ ತಂಟೆಗೆ, ಮೈ ಮುಟ್ಟಲು ಬಂದ ಪೊರ್ಕಿ ಮುಂಡು ಬ್ಯಾರಿಗಳೇ ಹುಷಾರ್!!! ಕಾರ್ಕಳದಲ್ಲಿ ಬ್ಯಾನರ್‌ ಅಳವಡಿಕೆ – ಕಹಳೆ ನ್ಯೂಸ್

ಕಾರ್ಕಳ : ಹಿಂದೂ ಹೆಣ್ಣು ಮಕ್ಕಳ ತಂಟೆಗೆ, ಮೈ ಮುಟ್ಟಲು ಬಂದ ಪೊರ್ಕಿ ಮುಂಡು ಬ್ಯಾರಿಗಳೇ ಹುಷಾರ್!!! ಜಾಗ್ರತೆ ಎಂದು ಸತೀಶ್, ಒನ್ ಆಫ್ ದಿ ಫ್ರೀಡಂ ಫೈಟರ್ ಎಂಬ ಹೆಸರಿನಲ್ಲಿ ಸಾಣೂರು ಗ್ರಾಮದ ಕಮಲಾಕ್ಷ ನಗರ ಎಂಬಲ್ಲಿ ಕಿಡಿಗೇಡಿಗಳು ಬ್ಯಾನರ್ ಅಳವಡಿಸಿದ್ದಾರೆ.

ಕಾರ್ಕಳ ಸಾಣೂರು ಗ್ರಾಮದ ಮುರತಂಗಡಿ ಕಮಲಾಕ್ಷ ನಗರ ಎಂಬಲ್ಲಿ ಅಳವಡಿಸಿರುವ ಬ್ಯಾನರ್‌ ನಲ್ಲಿ ಮುದ್ರಣಗೊಂಡ ಹೆಸರಿನ ಸುಮಾರು 50 ವರ್ಷದ ವ್ಯಕ್ತಿ ಕೂಲಿ ಕಾರ್ಮಿಕನಾಗಿದ್ದು, ಕಳೆದ ಐದಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಈತನನ್ನು ಹೆಂಡತಿ ಮಕ್ಕಳು ಬಿಟ್ಟು ಹೋಗಿದ್ದಾರೆ. ಈತ ತನ್ನ ತಮ್ಮಂದಿರೊಂದಿಗೆ ವಾಸವಾಗಿದ್ದು, ಇಂತಹ ಕೃತ್ಯ ನಡೆಸಲು ಸಾಧ್ಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಯಾರೋ ಈತನ ಹೆಸರಿನಲ್ಲಿ ಬ್ಯಾನರ್ ಹಾಕಿರಬಹುದು ಅಥವಾ ಮಾನಸಿಕ ಅಸ್ವಸ್ಥತೆಯನ್ನು ಬಳಸಿಕೊಂಡು ಸಮಾಜದಲ್ಲಿ ಶಾಂತಿ ಕಡದುವಂತ ಪ್ರಯತ್ನ ನಡೆಸಿರಬಹುದೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ