Sunday, January 19, 2025
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ರಾಜ್ಯ ಹೆದ್ದಾರಿಯಲ್ಲಿ ಅಗಲಕ್ಕೆ ಹನ್ನೆರಡು  ಫೀಟ್  ಆಳಕ್ಕೆ ಮೂರು ಫೀಟ್ ಹೊಂಡ : ವಾಹನ ಸವಾರರೇ ಟೇಪ್ ಹಿಡಿದು ಅಳತೆ – ಕಹಳೆ ನ್ಯೂಸ್

ಕುಕ್ಕೆಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ರಾಜ್ಯ ರಸ್ತೆ ಕುಮಾರಧಾರ ಸೇತುವೆಯಿಂದ ಕೈಕಂಬವರೆಗೆ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಎಂತ ಪರಿಣತಿ ಪಡೆದ ಚಾಲಕನಿಗೂ ಈ ಹೊಂಡ ತಪ್ಪಿಸಲು ಸಾಧ್ಯವೇ ಇಲ್ಲ ಅಂತ ಹೊಂಡಗಳು ಸೃಷ್ಟಿಯಾಗಿದೆ.

ಬೆಂಗಳೂರು, ಧರ್ಮಸ್ಥಳ, ಉಪ್ಪಿನಂಗಡಿ ಕಡೆಯಿಂದ ಕುಕ್ಕೆಗೆ ಬರುವ ಭಕ್ತರು,ಸಾರ್ವಜನಿಕರು,ಇದೆ ರಸ್ತೆಯಲ್ಲಿ ತಮ್ಮ ವಾಹನಗಳನ್ನು ಹರಿಸಿ ಕೊಂಡೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಅಧಿಕಾರಿಗಳು ಇದೆ ರಸ್ತೆಯಲ್ಲಿ ಸಂಚಾರಿಸುತ್ತಾರೆ,ಪಾಪ ಹೊಂಡ ಇದೆ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ ಎಂದು  ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂದು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಹನ ಸವಾರರಾದ ಉದ್ಯಮಿ ಸೀತಾರಾಮ ಗೌಡ,ದಿನೇಶ್ ಗಾಂಗೆಯ,ಉಮೇಶ್ ಅವರು ಇಂದು ಟೇಪ್ ಹಿಡಿದು ಅಳತೆ ಮಾಡಿದರು. ಕುಮಾರಧಾರ ಸೇತುವೆ ಬಳಿ ಸುಮಾರು 12 ಫೀಟ್ ಅಗಲಕ್ಕೆ, ಮೂರು ಫೀಟ್ ಆಳದ ಹೋಂಡ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಅಲ್ಲೇ ಸ್ವಲ್ಪ ಮುಂದೆ ಹೋದರೆ ಅದೇ ರೀತಿಯ ಇನ್ನೊಂದು ದೊಡ್ಡ ಕೊಂಡ ನಿರ್ಮಾಣ ಆಗಿದೆ. ಈ ಹೋಂಡ ತಪ್ಪಿಸುವ ಬರದಲ್ಲಿ ಬೈಕ್ ಸವಾರರು ಮಗುಚಿ ಬಿದ್ದು ಅಪಘಾತ ಸಂಭವಿಸುತ್ತಿದೆ. ಇನ್ನು ನಾಲ್ಕು ಚಕ್ರದ ವಾಹನಗಳಂತೂ ಹೊಂಡ ತಪ್ಪಿಸಲು ರೋಂಗ್ ಸೈಡ್ ನಲ್ಲಿ ಪ್ರಯಾಣ ಮಾಡುತ್ತಾರೆ.
ದುರ್ಘಟನೆಗಳು ಸಂಭವಿಸುವ ಮೊದಲೇ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಹೊಂಡಗಳನ್ನು ಮುಚ್ಚಿ ರಾಜ್ಯ ಹೆದ್ದಾರಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ, ಈ ರಾಜ್ಯ ಹೆದ್ದಾರಿಯಲ್ಲಿ ಸುಳ್ಯ ಮಡಿಕೇರಿ ಭಾಗಕ್ಕೆ ಸಂಚರಿಸುವ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕಾಗಿ ನಮ್ಮ ಕಳಕಳಿಯ ವಿನಂತಿ.