Saturday, November 23, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸಂಸ್ಕಾರ ಮೌಲ್ಯದಿಂದ ಹಿಂದೂ ರಾಷ್ಟ್ರಸದೃಢ : ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ – ಕಹಳೆ ನ್ಯೂಸ್

ಬೆಳ್ತಂಗಡಿ: ಸನಾತನ ಧರ್ಮವನ್ನು ಸಮೃದ್ಧಿಗೊಳಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ. ಆದರೆ ರಾಷ್ಟ್ರದಲ್ಲಿ ರಾಷ್ಟ್ರೀಯತೆ ಕೊರತೆ ಜತೆಗೆ ವೈಷಮ್ಯ ಭಾವವು ದೇಶದ ಬಲಾಡ್ಯತೆಗೆ ಹೊಡೆತ ಬೀಳಲಿದೆ. ಹೀಗಾಗಿ ಸಮರ್ಥ ಭಾರತ ಕಟ್ಟುವ ನೆಲೆಯಲ್ಲಿ ಶ್ರೀ ರಾಮಕ್ಷೇತ್ರ ಧರ್ಮ ಜಾಗೃತಿಯಿಂದ ಸಂಸ್ಕಾರ ಮೌಲ್ಯ ಬಿಂಬಿಸುವ ಕಾರ್ಯಕ್ಕೆ ಮುನ್ನುಡಿಯಿಟ್ಟಿದೆ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ರಾಮ ಕ್ಷೇತ್ರದಲ್ಲಿ ಮಂಗಳವಾರ ನಡೆದ ಜಗದ್ಗುರು ಪೀಠದ ಪೀಠಾಧೀಶ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೀನುಗಾರಿಕೆ ಸಚಿವ ಮಂಕಾಳ ಎಸ್‌. ವೈದ್ಯ, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌ ಮಾತನಾಡಿದರು. ಅಯೋಧ್ಯೆಯ ಕೇಶವದಾಸ್‌ ಮಹಂತ್‌ ಮಹಾರಾಜ್‌ ಸ್ವಾಮೀಜಿ, ಹರಿಕೃಷ್ಣ ಬಂಟ್ವಾಳ, ಚಾತುರ್ಮಾಸ್ಯ ಸಮಿತಿ ಪ್ರಧಾನ ಸಂಚಾಲಕ ಜಯಂತ್‌ ಕೋಟ್ಯಾನ್‌, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಕಾರ್ಪೋರೇಟರ್‌ ಕಿರಣ್‌ ಕುಮಾರ್‌, ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಭಟ್ಕಳ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಬಂಟ್ವಾಳ ಮೂಡಾ ಅಧ್ಯಕ್ಷ ಬೇಬಿ ಕುಂದರ್‌ ಉಪಸ್ಥಿತರಿದ್ದರು.

ಲೋಕೇಶ್‌ ಶಾಂತಿ ಮತ್ತು ಮಹೇಶ್‌ ಶಾಂತಿ ನೇತೃತ್ವದಲ್ಲಿ ಪಟ್ಟಾಭಿಷೇಕದ ಪೀಠಾರೋಹಣ ನೆರವೇರಿತು. ಟ್ರಸ್ಟಿ ತುಕರಾಮ್‌ ಸ್ವಾಗತಿಸಿದರು. ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ನಿರೂಪಿಸಿದರು.