Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ತೆನೆ ಹಬ್ಬ ಆಚರಣೆ-ಕಹಳೆ ನ್ಯೂಸ್

ಬಂಟ್ವಾಳ: ಇಂದು ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ತೆನೆ ಹಬ್ಬ ಆಚರಣೆ ಮಾಡಲಾಯಿತು, ಪ್ರತಿ ವರ್ಷವೂ ಗಣೇಶ ಚತುರ್ಥಿಯ ಎರಡು ದಿನದ ಮೊದಲು ಈ ಆಚರಣೆಯನ್ನು ನಡೆಸಲಾಗುವುದು. ಈ ದಿನವನ್ನು ಕುರಲ್​​​​​​ ಪರ್ಬ ಎಂದು ಕರೆಯಾಲಾಗುತ್ತದೆ. ಜತೆಗೆ ಇದನ್ನು ಪುರಲ್ದ ಕುರಲ್​​ ಎಂದು ಕರೆಯಲಾಗುತ್ತದೆ. ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಮುಂದೆ ಈ ಕುರಲ್​​​ನ್ನು ಇಟ್ಟು, ಇಡಿ ಊರಿಗೆ ಒಳ್ಳೆಯದನ್ನು ಮಾಡಿ, ಸುಖ ಸಂತೋಷವನ್ನು ನೀಡಿ. ಮಳೆ ಬೆಳೆ ಒಳ್ಳೆಯ ರೀತಿಯಲ್ಲಿ ಆಗಲಿ ಎಂದು ಪ್ರಾರ್ಥನೆ ಮಾಡಲಾಗುತ್ತದೆ.

ತೆನೆಯನ್ನು ದೇವಾಲಯದ ಧ್ವಜಸ್ತಂಬದ ಮುಂಭಾಗದಲ್ಲಿ ಪ್ರಾರ್ಥನೆ ಮಾಡಿ, ಪುರೋಹಿತರ ನೇತೃತ್ವದಲ್ಲಿ ತೆನೆಯನ್ನು ದೇವಾಲಯದ ಒಳಗೆ ತೆಗೆದುಕೊಂಡು ಹೋಗಿ ತಾಯಿ ಶ್ರೀ ರಾಜರಾಜೇಶ್ವರಿ ಮುಂದೆ ಇಟ್ಟು ಪೂಜೆ ಮಾಡಲಾಗುತ್ತದೆ. ವಿಶೇಷ ಪೂಜೆಗಳು ನಡೆದು ನಂತರ ಅದನ್ನು ಭಕ್ತರಿಗೆ ನೀಡಲಾಗುತ್ತದೆ. ಇದರ ಜತೆಗೆ  ಸೀಮೆಯ ಭಕ್ತಾಧಿಗಳು ದೇವರಿಗೆ ಮಾಡಿದ ನೈವೇದ್ಯವನ್ನು ಮನೆಮನೆಗೆ ಕೊಂಡು ಪೊಳಲಿ ಭಾಗದ ಮನೆ ಮನೆಯಲ್ಲಿ ಪುದ್ದರ್​​​ ಆಚರಣೆ ಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಭಟ್ ಪೊಳಲಿ, ಅನುವಂಶಿಕ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ದೇವಾಲಯದ ಅರ್ಚಕ ನಾರಾಯಣ ಭಟ್​, ರಾಮ್​​​ ಭಟ್​​, ​ಪರಮೇಶ್ವರ ಭಟ್ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಹಾಗೂ ಭಕ್ತರು ಮೊದಲಾದವರು ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು