Sunday, January 19, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ತಾಲೂಕು ಮಟ್ಟದ ಫುಟ್ಬಾಲ್‌ ಪಂದ್ಯಾಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ-ಕಹಳೆ ನ್ಯೂಸ್

ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು ಇವರ ಸಹಯೋಗದಲ್ಲಿ ಪುತ್ತೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್‌ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಈ ತಂಡದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಮಂತ್‌ಬಿ.ಎಲ್, ವಿಶ್ರುತ್‌.ಎನ್‌, ಜಿಷ್ಣುಪ್ರಕಾಶ್‌, ಜೀವನ್‌. ಕೆ, ರಿಕಿತ್‌. ಆರ್, ಚಿಂತನ್‌ ದೇವಯ್ಯ ಎನ್‌.ಜೆ, ಧನುಶ್‌ಕುಮಾರ್‌. ಜೆ.ವಿ , ಪುನೀತ್‌ಪೊನ್ನಪ್ಪ, ದೀಕ್ಷಿತ್ ಎಸ್ .ಎಸ್‌, ಶರತ್‌. ಜೆ, ಹಾರ್ದಿಕ್‌ ಬಿ.ಆರ್‌, ಹಾಗೂ ಪ್ರಥಮ ಪಿಯುಸಿವಿದ್ಯಾರ್ಥಿಗಳಾದ ನಿಶಾಂತ್‌.ಕೆ, ಎನ್.‌ಆರ್.‌ವಿವೇಕ್‌ ಸುಬ್ಬಯ್ಯ, ಅಕ್ಷಣ್‌ ಎಚ್‌. ಎಮ್‌, ಅಗತ್ಯ ಡಿ. ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್‌ ವಿ. ಎಸ್, ಡಾ. ಜ್ಯೋತಿಕುಮಾರಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತದೆ. ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಉಪನ್ಯಾಸಕ ಉಪನ್ಯಾಸಕೇತರ ವರ್ಗದವರು ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು