Sunday, January 19, 2025
ಕ್ರೈಮ್ಬೆಂಗಳೂರುರಾಜ್ಯಸಿನಿಮಾಸುದ್ದಿ

ವಿಚಾರಣೆ ವೇಳೆ ಸ್ಟೋನಿ ಬ್ರೂಕ್ ನಲ್ಲಿ ಮೌನವಾಗಿ ಕೂತ ದರ್ಶನ್ : ಫೋಟೋ ವೈರಲ್ – ಕಹಳೆ ನ್ಯೂಸ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಕೊನೆ ಹಂತಕ್ಕೆ ಬಂದು ತಲುಪಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯ ಕೆಲ ಪ್ರಮುಖ ಅಂಶಗಳು ಒಂದೊಂದಾಗಿ ಹೊರ ಬೀಳುತ್ತಿದೆ. ಈ ಮೊದಲು ರೇಣುಕಾಸ್ವಾಮಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ಮುಂದೆ ಅಂಗಲಾಚುತ್ತಿರುವ ಫೋಟೋ ವೈರಲ್ ಆಗಿದ್ದು ಇದೀಗ ಮತ್ತೊಂದು ಫೋಟೋ ವೈರಲ್ ಆಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಟೋನಿ ಬ್ರೂಕ್​ನಲ್ಲಿ ದರ್ಶನ್ ಹಾಗೂ ಗೆಳೆಯರು ಪಾರ್ಟಿ ಮಾಡಿದ್ದ ಜಾಗದಲ್ಲಿಯೇ ಅವರನ್ನೆಲ್ಲ ಕೂರಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಅವರ ಮುಂದೆ ಕೂತು ಲ್ಯಾಪ್​ಟಾಪ್​ನಲ್ಲಿ ಎಲ್ಲ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿರುವ ದೃಶ್ಯ ಚಿತ್ರದಲ್ಲಿ ಸೆರೆಯಾಗಿದೆ. ದರ್ಶನ್ ಮುಖ ಸಪ್ಪೆ ಮಾಡಿಕೊಂಡು ಕೂತಿದ್ದಾರೆ. ಫೋಟೋದಲ್ಲಿ ನಟ ಚಿಕ್ಕಣ್ಣ ಸಹ ದರ್ಶನ್​ರ ಪಕ್ಕ ಕೂತಿದ್ದಾರೆ. ಚಿಕ್ಕಣ್ಣ ಸಹ ತೀವ್ರ ಆತಂಕದಲ್ಲಿರುವುದು ತಿಳಿಯುತ್ತಿದೆ. ಸ್ಟೋನಿ ಬ್ರೂಕ್ ಮಾಲೀಕ ವಿನಯ್ ಸಹ ಚಿತ್ರದಲ್ಲಿದ್ದು ಆ ವ್ಯಕ್ತಿ ಸಹ ಆತಂಕದಲ್ಲಿದ್ದಾನೆ. ಇತರೆ ಕೆಲವು ಪೊಲೀಸ್ ಸಿಬ್ಬಂದಿ ಸಹ ಚಿತ್ರದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಟೋನಿ ಬ್ರೂಕ್​ನಲ್ಲಿ A2 ದರ್ಶನ್, A3 ಪವನ್, A10 ವಿನಯ್, A11 ನಾಗರಾಜ್​, A14 ಪ್ರದೋಷ್ ಅವರುಗಳನ್ನು ಸ್ಟೋನಿ ಬ್ರೂಕ್​ಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ನಟ ಚಿಕ್ಕಣ್ಣ ಸಹ ಕೊಲೆ ನಡೆದ ದಿನ ಪಾರ್ಟಿಯಲ್ಲಿದ್ದ ಕಾರಣ ಅವರನ್ನೂ ಸಹ ಮಹಜರಿಗೆ ಕರೆಸಲಾಗಿತ್ತು.