Sunday, January 19, 2025
ಉದ್ಯೋಗಬೆಂಗಳೂರುರಾಜ್ಯಸುದ್ದಿ

ನಮಸ್ಕಾರ ದೇವ್ರೂ…!!! ಡಾ. ಬ್ರೋ ಜೊತೆ ಕೆಲಸ ಮಾಡೋ ಆಸೆ ಇದೆಯಾ..? ; ಇಲ್ಲಿದೆ ಅವಕಾಶ – ಕಹಳೆ ನ್ಯೂಸ್

ಬೆಂಗಳೂರು: ನಮಸ್ಕಾರ ದೇವ್ರೂ ಎನ್ನುತ್ತಲ್ಲೆ ವಿಡಿಯೋ ಶುರು ಮಾಡುವ ನಮ್ಮ ಕನ್ನಡಿಗ, ಕನ್ನಡಿಗರ ಅಚ್ಚುಮೆಚ್ಚಿನ ಬ್ರದರ್, ಡಾ. ಬ್ರೊ, ತಮ್ಮ ಫ್ಯಾನ್ಸ್ ಗೆ ಖುಷಿ ಸುದ್ದಿ ನೀಡಿದ್ದಾರೆ. ಈಗಾಗಲೇ ಗೋ ಪ್ರವಾಸ ಹೆಸರಿನ ಕಂಪನಿ ಶುರು ಮಾಡಿ, ಜನಸಾಮಾನ್ಯರಿಗೆ ದೇಶ, ವಿದೇಶ ನೋಡಲು ಅವಕಾಶ ನೀಡಿರುವ ಗಗನ್, ಈಗ ತಮ್ಮ ಜೊತೆ ಕೆಲಸ ಮಾಡುವ ಅವಕಾಶ ನೀಡ್ತಿದ್ದಾರೆ.

ಡಾ. ಬ್ರೊ ಒಡೆತನದ ಕಂಪನಿ ಗೋ ಪ್ರವಾಸದಲ್ಲಿ ಕೆಲಸ ಖಾಲಿ ಇದೆ. ಗಗನ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಗನ್ ನೀಡಿರುವ ಮಾಹಿತಿ ಪ್ರಕಾರ, ಗೋ ಪ್ರವಾಸ ಕಂಪನಿಯಲ್ಲಿ, ಇಂಟರ್ನ್ಯಾಷನಲ್ ಆಪರೇಷನ್ ಎಕ್ಸಿಕ್ಯೂಟಿವ್, ಹಾಲಿಡೇ ಪ್ಯಾಕೇಜ್ ನಲ್ಲಿ ಕೆಲಸ ಮಾಡಿ ಅನುಭವ ಇರುವವರು ಕೆಲಸಕ್ಕೆ ಬೇಕಾಗಿದ್ದಾರೆ. ಇದಲ್ಲದೆ ದೇಶೀಯ ಆಪರೇಷನ್ ಎಕ್ಸಿಕ್ಯೂಟಿವ್, ಹಾಲಿಡೇ ಪ್ಯಾಕೇಜ್ ನಲ್ಲಿ ಕೆಲಸ ಮಾಡಿ ಅನುಭವ ಇರುವವರ ಅವಶ್ಯಕತೆ ಇದೆ, ಜೊತೆಗೆ, ಏಷ್ಯಾದ ದೇಶಗಳಿಗೆ ವೀಸಾ ನೀಡುವ ತಜ್ಞರ ಅಗತ್ಯವಿದೆ. ಟಿಕೆಟಿಂಗ್ ಹುದ್ದೆ ಕೂಡ ಖಾಲಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟೂ ನಾಲ್ಕು ಹುದ್ದೆ ಖಾಲಿ ಇದ್ದು, ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ತಿಳಿದಿರಬೇಕು. ಪಿಯುಸಿ ಪಾಸ್ ಆದವರು, ಪದವಿದರರು,ಟೂರಿಸ್ಟ್ ಕೋರ್ಸ್ ಮಾಡಿದವರಿಗೆ ಮೊದಲ ಆದ್ಯತೆ. ಗಗನ್ ಸಂಬಳ ಎಷ್ಟು ಕೊಡ್ತಾರೆ ಅನ್ನೋದನ್ನು ತಮ್ಮ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿಲ್ಲ. ನಿಮಗೆ ಈ ಕೆಲಸದಲ್ಲಿ ಅನುಭವವಿದ್ರೆ ಈಗ್ಲೇ ಅಪ್ಲೈ ಮಾಡಿ.  ನೀವು ಅರ್ಜಿ ಸಲ್ಲಿಸಬಹುದು.