Recent Posts

Monday, January 20, 2025
ಸುದ್ದಿ

ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಬಿ.ಆಚಾರ್ಯ ಮಂಗಳೂರು ದೇವಾಲಯಕ್ಕೆ ಭೇಟಿ – ಕಹಳೆ ನ್ಯೂಸ್

ಮಂಗಳೂರು: ಕರಾವಳಿಯು ಆಕರ್ಷಕ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರು ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳು ಕೂಡ ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡ್ತಾರೆ.

ಹಾಗೇ ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಬಿ.ಆಚಾರ್ಯ ಪತ್ನಿ ಸಮೇತ ಮಂಗಳೂರಿಗೆ ಸದ್ದಿಲ್ಲದೇ ಭೇಟಿ ನೀಡಿದ್ರು. ಮಂಗಳೂರಿನ ಕದ್ರಿಯಲ್ಲಿರೋ ಶ್ರೀ ಕಾಶಿ ಮಠ ಸಂಸ್ಥಾನದ ಹರಿದ್ವಾರದ ಶ್ರೀ ವ್ಯಾಸ ಮಂದಿರಕ್ಕೆ ಹಾಗೂ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ವ್ಯಾಸಾಶ್ರಮದ ಅಧಿಕಾರಿಗಳು, ಪ್ರಧಾನ ಅರ್ಚಕರು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು