Monday, January 20, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ವಾಮದಪದವಿನ ಮಹಾಕಾಳಿ ಗದ್ದೆ ವಾಂಬೆಟ್ಟುವಿನಲ್ಲಿ ನಡೆದ “ಕೃಷಿ ಕಲಿ ನಲಿ” ಕೆಸರಿನ ಆಟದ ಜೊತೆ ಕೃಷಿಯ ಕಲಿಕೆ ವಿನೂತನ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆ.ನಂ.ಬಾಲಕಿಯರ ನಿಲಯ ವಾಮದಪದವು ಮತ್ತು ಚೆನ್ನೈತ್ತೋಡಿ ಹಾಗೂ ಮೆ.ಪೂರ್ವ ಬಾಲಕರ ನಿಲಯ ವಾಮದಪದವು ಇವರ ಜಂಟಿ ಆಶ್ರಯದಲ್ಲಿ “ಕೃಷಿ ಕಲಿ ನಲಿ” ಕೆಸರಿನ ಆಟದ ಜೊತೆ ಕೃಷಿಯ ಕಲಿಕೆ ವಿನೂತನ ಕಾರ್ಯಕ್ರಮ ವಾಮದಪದವಿನಲ್ಲಿ ಮಹಾಕಾಳಿ ಗದ್ದೆ ವಾಂಬೆಟ್ಟುವಿನಲ್ಲಿ ನಡೆಯಿತು.

ವಿದ್ಯಾರ್ಥಿಗಳಿಗೆ ಕೃಷಿಯ ಕಲಿಕೆಯ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಾಟಿ ಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಕ್ಕಳ ಕೈ ಯಲ್ಲಿ ನೇಜಿ ನೀಡಿ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯುವ ಜನತೆ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆಯಬಹುದು. ಜಿಲ್ಲೆಯಲ್ಲಿ ಸಣ್ಣ ಸಣ್ಣ ಹಿಡುವಳಿದಾರರಾಗಿದ್ದು, ಯಾಂತ್ರಿಕವಾಗಿ ಕೃಷಿಯನ್ನು ಮಾಡಿದಾಗ ಆರ್ಥಿಕ ಲಾಭವನ್ನು ಪಡೆಯಲು ಸಾಧ್ಯವಿದೆ. ಸಾವಯವ ಪದ್ದತಿಯನ್ನು ಅನುಸರಿಸಿ ಕೃಷಿಯಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾಹಿತಿ ನೀಡಿದರು. ಕೃಷಿ ಯಾವತ್ತೂ ನಷ್ಟದಲ್ಲಿ ಇಲ್ಲ, ಆದರೆ ಕೃಷಿಯನ್ನು ಮಾಡುವ ವಿಧಾನಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು , ಉತ್ತಮ ಇಳುವರಿ ಕೊಡುವ ಹೊಸಹೊಸ ತಳಿಗಳನ್ನು ಕೃಷಿ ಇಲಾಖೆ ಅಥವಾ ಇತರ ಮೂಲಗಳಿಂದ ಪಡೆದು ಕೃಷಿಯನ್ನು ಮಾಡುವ ಬಗ್ಗೆ ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ಅವರು ಸಭಾ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಶೈಲಿಯಂತೆ ಭತ್ತದ ಕಲಶದಲ್ಲಿ ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿ ಅವರು ಕೃಷಿ ಸಂಸ್ಕ್ರತಿಯ ದ.ಕ.ಜಿಲ್ಲೆಯ ನೆಲಕ್ಕೆ ವಿಶೇಷವಾದ ಶಕ್ತಿ ಇದೆ.ವಿವಿಧ ಸಾಂಸ್ಕøತಿಕ ಮೆರುಗು ಪಡೆದ ಜಿಲ್ಲೆಯ ಜನರು ಭಾಗ್ಯವಂತರು ಎಂದು ಅವರು ಇಲ್ಲಿನ ವಿಶೇಷತೆಯ ಬಗ್ಗೆ ಕೊಂಡಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮಬಾಳು – ಸಮಪಾಲು ಎಂಬ ಆಶಯದಂತೆ ಕಾರ್ಯನಿರ್ವಹಿಸುತ್ತದೆ. ಕೃಷಿ ದೇವರಾಜ ಅರಸರ ಕನಸು ಆಗಿತ್ತು.ಹಾಗಾಗಿ ಈ ಕಾರ್ಯಕ್ರಮ ಪ್ರಸ್ತುತ ಎಂದು ತಿಳಿಸಿದರು. ಪಾಠದ ಜೊತೆ ಒಂದಷ್ಟು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸಿಕ್ಕಿದಾಗ ಜೀವನದಲ್ಲಿ ಸಾಧನೆಗೆ ಕಾರಣವಾಗಬಹುದು ಎಂದು ಅವರು ತಿಳಿಸಿದರು. ವಾಮದಪದವಿನಲ್ಲಿ ನಡೆದ ಕೃಷಿ ನಲಿ ಕಲಿ ಕಾರ್ಯಕ್ರಮ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮವಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ಭತ್ತದ ಗದ್ದೆಗೆ ಹಾಲೆರೆದು ಕ್ರೀಡಾ ಕೂಟಕ್ಕೆ ಅತಿಥಿಗಳು ಚಾಲನೆ ನೀಡಿದರು.

ಚೆನ್ನೈತ್ತೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ವನಿತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಧರ್ ಅವರು ಕೃಷಿ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ನವೀನ್,ಗ್ರಾಮಪಂಚಾಯತ್ ಪಿಡಿಒ ಪ್ರಶಾಂತ್ ಜೊಯೆಲ್, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದ ಪದವಿನ ಉಪನ್ಯಾಸಕ ಉದಯ, ಉಪನ್ಯಾಸಕಿ ಮೇರಿ ಉಪಸ್ಥಿತರಿದ್ದರು.

ನಪದ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಕೃಷಿಕೆಯಾಗಿರುವ ಹಿರಿಯಾದ ಲೀಲಾ ಅವರನ್ನು ಸನ್ಮಾನಿಸಲಾಯಿತು. ವೀರಪ್ಪ ಅವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಸಿಬ್ಬಂದಿಗಳಾದ ಉದಯ ಸ್ವಾಗತಿಸಿ ಧನ್ಯವಾದ ಭವಾನಿ ನೀಡಿದರು.