Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಕಲ್ಲಡ್ಕ :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಶಿಷ್ಟ ರೀತಿಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಪ್ರವೇಶ ದ್ವಾರದಲ್ಲಿ ವೃಕ್ಷದ ವರ್ಣಚಿತ್ರವನ್ನಿಡಲಾಗಿದ್ದು ಶಿಕ್ಷಕರು ಹಸಿರು ಬಣ್ಣದ *ಬೆರಳಚ್ಚು* ಬರೆಯುವ ಮೂಲಕ ಎಲೆಗಳನ್ನು ಚಿತ್ರಿಸಿದರು. ಬೆಳಗುತ್ತಿರುವ ಹಣತೆಗಳನ್ನು ಡಾ. ಎಸ್ ರಾಧಾಕೃಷ್ಣನ್ ಅವರ ಭಾವಚಿತ್ರದ ಮುಂದಿಟ್ಟು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷರನ್ನು ವಿಶೇಷವಾಗಿ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.

ನಂತರದಲ್ಲಿ ಕಾರ್ಯಕ್ರಮದ ಮುಖ್ಯ ಬಿಂದುವಾದ *ಪಾದಪೂಜೆ* ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಶಿಕ್ಷಕ ಮತ್ತು ಅತಿಥಿಗಳಿಗೆ, ಹಿರಿಯರಿಗೆ ಭಾವನಾತ್ಮಕವಾಗಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಶ್ರೀ ಗೋಪಾಲ ಶೆಣೈ ಕಂಟಿಕ ಅವರು ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ, ಹಿರಿಯರೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಡಾ. ಕಮಲಾ ಪ್ರಭಾಕರ ಭಟ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಅಭ್ಯಾಗತರಾಗಿ ಆಗಮಿಸಿದ ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶ್ರೀ ಮುದರ ಅವರು ಶಿಕ್ಷಕ ಪದದ ಅರ್ಥ ಮತ್ತು ವಿದ್ಯಾರ್ಥಿಗಳು ಹೇಗಿರಬೇಕು ಎಂಬುದಾಗಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೊಬ್ಬ ನಿವೃತ್ತ ಶಿಕ್ಷಕ ಶ್ರೀ ನಾರಾಯಣ ಗೌಡ ಕುದ್ರೆಬೆಟ್ಟು ಮಾತನಾಡಿ ವಿದ್ಯಾರ್ಥಿಗಳಲ್ಲಿ ತಮ್ಮತನವನ್ನು ಸೃಷ್ಟಿ ಮಾಡುವವರೇ ಶಿಕ್ಷಕರು, ತ್ರಿಮೂರ್ತಿಗಳಂತೆ ಸೃಷ್ಟಿ(ಉತ್ತಮ ವ್ಯಕ್ತಿತ್ವ), ಸ್ಥಿತಿ(ರಕ್ಷಣೆ), ಲಯ(ಕೆಟ್ಟತನದ ನಾಶ) ಈ ಮೂರು ಕಾರ್ಯಗಳನ್ನು ನಿರ್ವಹಿಸುವರು ಎಂದು ನುಡಿದರು.
ಎಲ್ಲಾ ಉಪನ್ಯಾಸಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಸಿಹಿ ನೀಡಿ ಗೌರವಿಸಿದರು. ವಿದ್ಯಾರ್ಥಿಗಳಾದ ಕು. ಪುನೀತಾ ನಿರೂಪಣೆ, ಕು. ಪ್ರಜ್ಞಾ ಸ್ವಾಗತಿಸಿ, ಕು. ಬಿಂದು ವಂದನಾರ್ಪಣೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು