Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಭವಿಷ್ ಘಟಕದ ಉದ್ಘಾಟನಾ ಸಮಾರಂಭ – ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಭವಿಷ್ ಘಟಕದ ಉದ್ಘಾಟನಾ ಸಮಾರಂಭವು ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ನಡೆಯಿತು. ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶ್ರೀ ಮುದರ ಎಸ್ ಬನ್ನೂರು ಇವರು ಪರದೆ ಸರಿಸುವ ಮೂಲಕ ಭವಿಷ್ ಘಟಕವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಪರದೆ ಹಿಂದಿದ್ದ ಭಾವಚಿತ್ರದಲ್ಲಿ ಭಾರತ ಭೂಪಟದ ನಡುವೆ ಶಿಕ್ಷಕಿಯ ಚಿತ್ರವನ್ನು ಜೋಡಿಸಲಾಗಿತ್ತು. ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಶ್ರೀ ಗೋಪಾಲ ಶೆಣೈ ಕಂಟಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭವಿಷ್ ಘಟಕದ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕ ಶ್ರೀ ಮುದರ ಅವರು ಶಿಕ್ಷಕ-ಶಿಕ್ಷಕಿಯರ ಕರ್ತವ್ಯಗಳನ್ನು ಸ್ಮರಿಸಿ ಎಚ್ಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿವೃತ್ತ ಶಿಕ್ಷಕ ಶ್ರೀ ನಾರಾಯಣ ಗೌಡ ಕುದುರೆಬೆಟ್ಟು ಎಲ್ಲರಲ್ಲಿಯೂ ಶಿಕ್ಷಕಗುಣವಿದೆ, ವರ್ಣಮಾತ್ರಂ ಕಲಿಸಿದಾತಂ ಗುರು. ಎಲ್ಲರೂ ತಮ್ಮಲ್ಲಿರುವ ಶಿಕ್ಷಕನನ್ನು ಗುರುತಿಸಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಬೇಕು ಎಂದರು. ಸಂಸ್ಥೆಯ ಹಿರಿಯರೂ ಎಲ್ಲರ ಗುರುಗಳೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಡಾ. ಕಮಲಾ ಪ್ರಭಾಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಪ್ರಜ್ಞಾ ಸ್ವಾಗತಿಸಿ, ಕು. ಬಿಂದು ವಂದಿಸಿ ಕು. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು