ಗಣೇಶ ಚತುರ್ಥಿ ಹಬ್ಬ ಹಿನ್ನಲೆ : ನಾಳೆ ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ `BBMP’ ಆದೇಶ! – ಕಹಳೆ ನ್ಯೂಸ್
ಬೆಂಗಳೂರು: ಸೆಪ್ಟೆಂಬರ್.7ರಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆದೇಶಿಸಿದೆ.
ದಿನಾಂಕ: 07-09-2024ರ ಶನಿವಾರದಂದು “ಗಣೇಶ ಚತುರ್ಥಿ ಹಬ್ಬದ ” ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ರವರು ತಿಳಿಸಿದ್ದಾರೆ.
ಸಹಾಯ 2.0 ಮೂಲಕ ನಾಗರೀಕರ ದೂರುಗಳಿಗೆ ತ್ವರಿತ ಸ್ಪಂದನೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯ 2.0 ತಂತ್ರಾಂಶದ ಮೂಲಕ ಬರುವ ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಲಾಗುತ್ತಿದೆ. ಈ ಸಂಬಂಧ 1ನೇ ಜನವರಿ 2023 ರಿಂದ 3ನೇ ಸೆಪ್ಟೆಂಬರ್ 2024 ರವರೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಲಯವಾರು ಬಂದಿರುವ ದೂರುಗಳು(237359), ಇತ್ಯರ್ಥಪಡಿಸಲಾದ ದೂರುಗಳು(224933), ಬಾಕಿಯಿರುವ ದೂರುಗಳು(6875) ಇದ್ದು, ಈ ಪೈಕಿ 3987 ದೂರುಗಳು ಇತ್ಯರ್ಥ ಪಡಿಸುವ ಕಾರ್ಯ ಪ್ರಕ್ರಿಯೆಯಲ್ಲಿದ್ದು, 2535 ಲಾಂಗ್ ಟರ್ಮ್ ಸೆಲ್ಯೂಷನ್(LTS) ಆಗಿರುತ್ತದೆ. ಸದರಿ ಮಾಹಿಯನ್ನು ನೀಡಲಾಗಿದೆ.
ಪಾಲಿಕೆಗ ಸಹಾಯವಾಣಿ ಸಂಖ್ಯೆಯಾದ 1533 ಸಹಾಯವಾಣಿ ಸಂಖ್ಯೆ ಹಾಗೂ ಕೆಳ ಕಾಣಿಸುವ 2 ತಂತ್ರಾಂಶ ಹಾಗೂ ವೆಬ್ ಸೈಟ್ ಮೂಲಕ ನಾಗರೀಕರು ದೂರುಗಳನ್ನು ನೀಡಬಹುದಾಗಿದೆ. ಸದರಿ ದೂರುಗಳನ್ನು ಇಂಟಿಗ್ರೇಟ್ ಕಮಾಂಡ್ ಕಂಟ್ರೋಲ್ ಸೆಂಟರ್(ICCC) ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಕಾಲಮಿತಿಯೊಳಗಾಗಿ ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
1533ಗೆ ಕರೆ ಮಾಡಿ ದೂರು ನೀಡಿ:
ಬಿಬಿಎಂಪಿಗೆ ಸಂಬಂಧಿಸಿದಂತೆ ನಾಗರೀಕರು ಯಾವುದೇ ಸಮಸ್ಯೆ/ದೂರುಗಳಿದ್ದರು ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533 ಗೆ ಕರೆ ಮಾಡಿ ಮಾಹಿತಿ ನೀಡಬಹುದು.
ಪಾಲಿಕೆ ಸಹಾಯವಾಣಿ ಸಂಖ್ಯೆ: 1533