Friday, November 22, 2024
ಸುದ್ದಿ

ಪುರಾತನ ಕಾಲದ ಜೈನ ಬಸಧಿಯ ಅಡಿಪಾಯ ಅಗೆದು ನಿಧಿಗಾಗಿ ಶೋಧಾಚರಣೆ – ಕಹಳೆ ನ್ಯೂಸ್

ಬೆಳ್ತಂಗಡಿ: ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲು ಎಂಬಲ್ಲಿ ಪುರಾತನ ಕಾಲದ ಅಜೀರ್ಣ ವ್ಯವಸ್ಥೆಯಲ್ಲಿದ ಜೈನ ಬಸಧಿಯ ಅಡಿಪಾಯ ಅಗೆದು ನಿಧಿಗಾಗಿ ಶೋಧಾಚರಣೆ ನಡೆಸಿದ ಘಟನೆ ನಡೆದಿದೆ.

ರಾತ್ರಿ 8 ಗಂಟೆಗೆ ಸುಮಾರಿಗೆ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ತಡೆದು ಪ್ರಶ್ನಿಸಿದಾಗ ಮೀನು ಹಿಡಿಯಲು ಬಂದದ್ದೆಂದು ಹೇಳಿ ಜಾಗ ಖಾಲಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಸ್ಥಳೀಯರು ಅನುಮಾನದಿಂದ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಬಸದಿಯ ಕಲ್ಲುಗಳನ್ನು ಸರಿಸಿ ಗುಂಡಿ ತೋಡಲಾಗಿದ್ದು, ಸ್ಥಳದಲ್ಲಿ ತೆಂಗಿನಕಾಯಿ, ಹೂವು, ವೀಳ್ಯದೆಲೆ ಮುಂತಾದ ಸಾಮಗ್ರಿಗಳು ಸಿಕ್ಕಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಧಿ ಶೋಧಕ್ಕಿಂತ ಮೊದಲು ಪೂಜೆ ಮಾಡಿರಬಹುದು. ಎರಡು ದಿನಗಳಿಂದ ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ವಾಹನದ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದು, ಧರ್ಮಸ್ಥಳ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.