Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆಯಲ್ಲಿ ಸೆ. 07ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆಯಲ್ಲಿ ಸೆ. 07ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.

ಸೆ.07ರಂದು ಬೆಳಗ್ಗೆ 8 ಗಂಟೆಗೆ ಕದಿರು ಪೂಜೆ, ಹಾಗೂ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ ವಿವಿಧ ಭಜನಾ ಮಂಡಳಿಯವರಿAದ ಭಜನೆ ನಡೆಯಲಿದೆ. ಬೆಳಗ್ಗೆ 10ರಿಂದ ಮಕ್ಕಳಿಗೆ ಗಣೇಶನ ಚಿತ್ರಬಿಡಿಸುವುದು ಮತ್ತು ಭಕ್ತಿಗೀತೆ, ಸಾರ್ವಜನಿಕರಿಗೆ ಭಕ್ತಿಗೀತೆ ಸ್ಫರ್ಧೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಪುನೀತ್ ಆರ್ಕೆಸ್ಟ್ರಾ ಪುತ್ತೂರು ಇವರಿಂದ ‘ಭಕ್ತಿ ರಸಮಂಜರಿ’ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಕರುನಾಡ ಗಾನಗಂಧರ್ವ ಬಿರುದಾಂಕಿತಾ ಮಿಥುನ್ ರಾಜ್ ವಿದ್ಯಾಪುರ್ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನ ‘ವಾಯ್ಸ್ ಆಫ್ ಆರಾಧನ’ ಮೂಡಬಿದ್ರೆ ತಂಡದವರಿAದ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಬಳಿಕ ಮಹಾಪೂಜೆ ನಡೆದು, ಮೈಂದನಡ್ಕ-ಕೊಯಿಲ-ಮುಡಿಪಿನಡ್ಕ-ಪಟ್ಟಿ ಮಾರ್ಗವಾಗಿ ಶ್ರೀ ಗಣಪತಿ ದೇವರ ಶೋಭಾಯಾತ್ರೆ ಸಾಗಿ, ಪಟ್ಟಿ ಶ್ರೀ ಕೃಷ್ಣ ಯುವಕ ಮಂಡಲ ಇವರ ಸಹಕಾರದೊಂದಿಗೆ ಕ್ಷೀರಹೊಳೆಯಲ್ಲಿ ಶ್ರೀ ಗಣಪತಿ ವಿಗ್ರಹ ವಿಸರ್ಜನೆ ನಡೆಯಲಿದೆ.