Thursday, December 5, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮೊಸರು ಕುಡಿಕೆ ಉತ್ಸವದಲ್ಲಿ ಅಂಬಿಕಾ ವಿದ್ಯಾರ್ಥಿಗಳಿಗೆ ಬಹುಮಾನ – ಕಹಳೆ ನ್ಯೂಸ್

ಪುತ್ತೂರು :ವಿಶ್ವ ಹಿಂದೂ ಪರಿಷತ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿ ಮತ್ತು ಅಭಿನಂದನಾ ಪತ್ರಗಳನ್ನು ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

9 ಮತ್ತು 10ನೇ ತರಗತಿಯ ಹುಡುಗರ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಬಿ ಆರ್ ಸೂರ್ಯ ಪ್ರಥಮ ಸ್ಥಾನವನ್ನು ಮತ್ತು ಶ್ರೀಹರಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹುಡುಗಿಯರ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ 10 ನೇ ತರಗತಿಯ ಅವನಿ ಯು ಎನ್ ಪ್ರಥಮ ಸ್ಥಾನವನ್ನು ಅದಿತಿ ಯು ಎನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 6ರಿಂದ 8ನೇ ತರಗತಿಯ ಹುಡುಗಿಯರ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ 8ನೇ ತರಗತಿಯ ದ್ವಿತಿ ಆರ್ ಪ್ರಥಮ ಸ್ಥಾನವನ್ನು ಮತ್ತು ಬಿ ತೃμÁ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಹುಡುಗರ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ 8ನೇ ತರಗತಿಯ ಜಿತಿನ್ ಗೌಡ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 11ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ನಡೆದ ಸ್ಮರಣ ಶಕ್ತಿ ವಿಭಾಗದ ಸ್ಪರ್ಧೆಯಲ್ಲಿ 9ನೇ ತರಗತಿಯ ತನ್ವಿ ಎ ರೈ ಪ್ರಥಮ ಸ್ಥಾನವನ್ನು ವಿದ್ಯಾಪೈ ದ್ವಿತೀಯ ಸ್ಥಾನವನ್ನು ಮತ್ತು ನಿಧಿ ಎಮ್ ಯು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 9ನೇ ತರಗತಿಯ ರಕ್ಷಾ ಎಸ್ ಎಸ್ ಪ್ರಥಮ ಸ್ಥಾನವನ್ನು ಮತ್ತು ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ 6ನೇ ತರಗತಿಯ ಶ್ರೀವತ್ಸ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು