Tuesday, January 21, 2025
ಉಡುಪಿಸುದ್ದಿ

ದ. ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಬೈಲ್ ಅಸೋಸಿಯೇಷನ್ ನ 2024 -25 ರ ನೂತನ ಸಮಿತಿಯ ಪದಗ್ರಹಣ-ಕಹಳೆ ನ್ಯೂಸ್

ಉಡುಪಿ : ದ. ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಬೈಲ್ ಅಸೋಸಿಯೇಷನ್ ನ 2024 -25 ರ ನೂತನ ಸಮಿತಿಯ ಪದಗ್ರಹಣ
ನಗರದ ಹೋಟೆಲ್ ಎಸೆಂಟಿಯಾ ಮಣಿಪಾಲ್ ಇನ್ ಹೋಟೆಲ್‍ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಲ್ ಇಂಡಿಯಾ ಮೊಬೈಲ್ ರಿಟೇಲ್ ಅಸೋಸಿಯೇಷನ್ ನ ಕರ್ನಾಟಕ ದ ಅಧ್ಯಕ್ಷರಾದ ರವಿಕುಮಾರ್ ಆಗಮಿಸಿ ಮಾತನಾಡಿ. ಸವಾಲುಗಳನ್ನು ಎದುರಿಸಿ ಮುಂದೆ ಬರಬೇಕು. ಇಕಾಮರ್ಸ್ ಮತ್ತು ಆನ್ಲೈನ್ ಕಂಪ್ಯೂಟಿಷನ್ ದರದಲ್ಲಿ ಆಗುತಿರುವ ಏರಿಳಿತದಿಂದ ಈಗಿನ ದಿನಗಳಲ್ಲಿ ವ್ಯಾಪಾರಿಗಳಿಗೆ ಆಗುತ್ತಿರುವ ನಷ್ಟ ದ ಕುರಿತಾಗಿ ಚರ್ಚಿಸಿದರು. ಕಠಿಣ ಪರಿಶ್ರಮದಿಂದ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗಾದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಂತರ ಕೋಸ್ಟೆಲ್ ಇನ್ಸ್ಪೆಕ್ಟರ್ ಪ್ರಮೋದ್ ಅವರು ಮಾತನಾಡಿ ಸಂಘಟನೆಗಳಲ್ಲಿ ಒಗ್ಗಟ್ಟು ಬಹಳ ಪ್ರಾಮುಖ್ಯತೆ ಎಂದ ಅವರು ಯಶಸ್ಸಿನತ್ತ ಮುನ್ನುಗ್ಗುಲು ಗುರಿ ಇರಬೇಕು ಸಂಘದ ಸದಸ್ಯರೆಲ್ಲರ ಪರಿಶ್ರಮದಿಂದ ಉತ್ತಮ ಸಂಸ್ಥೆಗಳು ಬೆಳೆಯಲು ಸಾಧ್ಯ. ಮೊಬೈಲ್ ಅಸೋಸಿಯೇಷನ್ ಟೀಮ್ ಉತ್ತಮವಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ 2024 -25 ರ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಮಾಬಿಯಾನ್. ಉಪಾಧ್ಯಕ್ಷರಾಗಿ ಇಮ್ತಿಹಿಯಾಜ್. ಕಾರ್ಯದರ್ಶಿಯಾಗಿ ಪ್ರೀತಮ್. ಜೊತೆಕಾರ್ಯದರ್ಶಿಯಾಗಿ ಹರಿಯಂತ್ ಜೈನ್. ಕೋಶಾಧಿಕಾರಿಯಾಗಿ ಇಮ್ರಾನ್. ಹಾಗೂ ಮಾರ್ಗದರ್ಶಕರಾಗಿ ಗುರುದತ್ತ್ ಕಾಮತ್ ಅವರನ್ನ ನೇಮಕ ಮಾಡಲಾಯಿತು.

ಇದೇ ವೇಳೆ ಕಲಿಕೆ, ಅತ್ಲಟಿಕ್, ಸ್ಪೋರ್ಟ್ಸ್ ಗಳಲ್ಲಿ ಸಾಧನೆ ಮಾಡಿದಂತಹ ಅಸೋಸಿಯೇಷನ್ ನ ಸದಸ್ಯರ ಮಕ್ಕಳನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ಮುನೀರ್ ಅವರ ಅನುಪಸ್ಥಿತಿಯಲ್ಲಿ ಮಾಜಿ ಅಧ್ಯಕ್ಷರಾದ ಶೈಲೆಂಧ್ರ ಸರಲಯ ಅವರು ಕಾರ್ಯದರ್ಶಿ ಹರಿಯಂತ್ ಜೈನ್. ಕೋಶಾಧಿಕಾರಿ ಸಲೀಮ್ ಉಪಸ್ಥಿತರಿದ್ದರು ಅವರಿಗೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದ. ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಮೊಬೈಲ್ ವಿತರಕರು ಭಾಗವಹಿಸಿದ್ದರು. ಉಮೇಶ್ ಕುಮಾರ್ ಸ್ವಾಗತ ಹಾಗೂ ವಂದನಾ ಕಾರ್ಯಕ್ರಮ, ಮತ್ತು ಶ್ರೀಮತಿ ವಿಜೇತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.