Monday, January 20, 2025
ಸುದ್ದಿ

ಡಿಸೆಂಬರ್ 2ರಂದು ನಟಿ ಪ್ರಿಯಾಂಕ ಚೋಪ್ರಾ, ಗಾಯಕ ನಿಖ್‍ ಮದುವೆ – ಕಹಳೆ ನ್ಯೂಸ್

ದೆಹಲಿ: ಸದ್ಯ ಬಾಲಿವುಡ್‍ನಲ್ಲಿ ಎರಡು ಜೋಡಿಗಳು ಹಸೆಮಣೆ ಏರಲು ರೆಡಿಯಾಗಿವೆ. ಇದೀಗ ನಿಖ್ ಹಾಗೂ ಪಿಗ್ಗಿ ಎರಡು ಸಂಪ್ರದಾಯದಂತೆ ಮದುವೆಯಾಗುತ್ತಾರಂತೆ.

ನಟಿ ಪ್ರಿಯಾಂಕ ಚೋಪ್ರಾ ಗಾಯಕ ನಿಖ್‍ನ ಮದುವೆಯಾಗುತ್ತಿರುವ ವಿಚಾರ ಗೊತ್ತಿರುವುದೇ. ಈಗಾಗಲೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿದೆ. ಅಲ್ಲದೆ ಇನ್ನೇನು ಕೆಲವೇ ದಿನವೇ ದಿನಗಳಲ್ಲಿ ಮದುವೆಯಾಗುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಈ ಜೋಡಿ ಡಿಸೆಂಬರ್‍ನಲ್ಲಿ ಎರಡು ಸಂಪ್ರದಾಯದಂತೆ ಮದುವೆಯಾಗಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಇಬ್ಬರೂ ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಲು ಸಿದ್ದವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಸಂಪ್ರದಾಯದಂತೆ ಡಿಸೆಂಬರ್ 2ರಂದು ರಾಜಸ್ಥಾನದ ಜೋಧ್ಪುರದಲ್ಲಿ ಹಮ್ಮಿಕೊಂಡಿದ್ದು, ಅಲ್ಲಿನ ಉಮೀದ್ ಭವನ್ ಪ್ಯಾಲೇಸ್ ಹೋಟೆಲ್ ನಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 1500 ರಿಂದ 2000 ಮಂದಿ ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.