Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

“ಸರಕಾರಿ ಶಾಲೆಗೆ ನನ್ನ ಕೈ ಕಾಣಿಕೆ” ಎಂಬ ವಿನೂತನ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ : ಉನ್ನತ ಕೆಲಸಗಳು ಸಣ್ಣ ಸಣ್ಣ ದೇಣಿಗೆಗಳಿಂದಲೇ ಆರಂಭವಾಗುತ್ತವೆ ಹತ್ತು ಹಲವು ಕೈಗಳು ಜೊತೆಯಾಗಿ ಸೇರಿದಾಗ ಯಾವ ಅಭಿವೃದ್ಧಿ ಕೆಲಸವು ನಿರಾಯಾಸವಾಗಿ ನಡೆಯಲು ಸಾಧ್ಯವಾ ಗುತ್ತದೆ.ಎಂದು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಶ್ರೀಯುತ ಹಾಜಬ್ಬ ಹೇಳಿದರು. ಅವರು ಚಂದ್ರಿಕಾ ವೆಜಿಟೇಬಲ್ಸ್ ಮೇಲ್ಕಾರ್ ಇಲ್ಲಿ “ಸರಕಾರಿ ಶಾಲೆಗೆ ನನ್ನ ಕೈ ಕಾಣಿಕೆ” ಎಂಬ ವಿನೂತನ ಕಾರ್ಯಕ್ರಮದಲ್ಲಿ . ದೇಣಿಗೆಯಾಗಿ ತಮ್ಮ ಕಿರು ಕಾಣಿಕೆಯನ್ನು ನೀಡಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದದ್ದು ಶಿಕ್ಷಣದಿಂದ ಮಾತ್ರವೇ ಎಲ್ಲಾ ರೀತಿಯ ಬೆಳವಣಿಗೆಯನ್ನು ಹೊಂದಲು ಸಾಧ್ಯ ಈ ಪ್ರಕಾರವಾಗಿ ಸರ್ಕಾರಿ ಶಾಲೆಗಳ ಕೆಲಸವು ಮಾದರಿಯಾಗಿದೆ ಹಾಗೂ ಸೇವಾ ನಿರತರಾಗಿ ತೊಡಗಿಕೊಂಡಿರುವ ಶಿಕ್ಷಕ ವರ್ಗವು ಇದಕ್ಕೆ ಉತ್ತಮ ಉದಾಹರಣೆ ಅಲ್ಲದೆ ಸಾರ್ವಜನಿಕವಾಗಿ ವಿದ್ಯಾ ಆಸಕ್ತ ಮಹನೀಯರು ನೀಡುವ ಕೊಡುಗೆಗಳು ಒಂದು ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತವೆ ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಹಾಗೂ ಅದಕ್ಕೆ ಪೂರಕವಾದ ವಾತಾವರಣವನ್ನು ಕೊಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭೆಯ ಮಾಜಿ ಉಪಾಧ್ಯಕ್ಷೆ ಜೇಸಿಂತ ಡಿಸೋಜ, ರಾಜ್ಯ ಮಟ್ಟದ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತ ಶರ್ಮಾ ಪಿ ಜಿ , ಚಂದ್ರಿಕಾ ವೆಜಿಟೇಬಲ್ ಮೆಲ್ಕಾರ್ ಇದರ ಮಾಲಕ ಮಹಮ್ಮದ್ ಶರೀಫ್, ಸಹೋದರ ಮಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು