Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ನ್ಯಾಯ ಕೇಳಲು ಗ್ರಾಮಸ್ಥರ ಸೇರುವಿಕೆಯಲ್ಲಿ ಪೊಳಲಿ ಅಡ್ಡೂರು ಸೇತುವೆ ಹೋರಾಟ ಸಮಿತಿ ಸೃಷ್ಟಿ-ಕಹಳೆ ನ್ಯೂಸ್

ಬಂಟ್ವಾಳ: ಅಡ್ಡೂರು ಸೇತುವೆಗೆ ಸಂಬAಧಿಸಿದAತೆ ನ್ಯಾಯವನ್ನು ಕೇಳಲು ಗ್ರಾಮಸ್ಥರ ಸೇರುವಿಕೆಯಲ್ಲಿ ಪೊಳಲಿ ಅಡ್ಡೂರು ಸೇತುವೆ ಹೋರಾಟ ಸಮಿತಿ ಸೃಷ್ಟಿಯಾಗಿದೆ.

ಪೊಳಲಿ ವೆಂಕಟೇಶ ನಾವಡ ಅವರನ್ನು ಹೋರಾಟ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಉಳಿದ ಸ್ಥಳೀಯರಿಗೆ ವಿವಿಧ ಹುದ್ದೆ ಗಳನ್ನು ನೀಡಲಾಗಿದ್ದು ಹೋರಾಟದ ಕಿಚ್ಚು ಮೂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಬಂಧ ಹೇರಿ ತಿಂಗಳಾಗುತ್ತಾ ಬರುತ್ತಿದ್ದು, ಈವರೆಗೆ ಸರಿಯಾದ ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲಾವಾಗಿದೆ, ಇದರ ವಿರುದ್ದ ಮತ್ತು ಜನರಿಗೆ ಸೂಕ್ತವಾದ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯರು ವ್ಯವಸ್ಥೆ ವಿರುದ್ಧ ಹೋರಾಡಲು ಪೊಳಲಿ ಅಡ್ಡೂರು ಸೇತುವೆ ಹೋರಾಟ ಸಮಿತಿ ಎಂಬ ಹೆಸರಿನಲ್ಲಿ ಹೋರಾಟ ಸಮಿತಿ ರಚನೆ ಮಾಡಿದ್ದು,ಇಂದು ಪೊಳಲಿ ಯ ಸರ್ವಮಂಗಲ ಸಭಾಂಗಣದಲ್ಲಿ ಅಧಿಕೃತ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜನರ ಓಡಾಟಕ್ಕೆ ಸಾಕಷ್ಟು ತೊಂದರೆ ಯಾಗಿದ್ದು, ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವಲ್ಲಿ ಹಿಂದೇಟು ಹಾಕಿದ್ದಾರೆ. ಮತ್ತು ಈ ಭಾಗದ ಜನರಿಗೆ ನ್ಯಾಯ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ.

ವರದಿ ಬಳಿಕ ನಮ್ಮ ನಿರ್ಧಾರ: ಚಂದ್ರಹಾಸ ಪಲ್ಲಿಪಾಡಿ.
ಜಿಲ್ಲಾಡಳಿತ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ ಬಳಿಕ ಈ ಭಾಗದ ಸಾರ್ವಜನಿಕರಿಗೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಸೂಕ್ತವಾದ ಬದಲಿ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲಾವಾಗಿದೆ.

ನಾವು ಈ ಬಗ್ಗೆ ಹೋರಾಟ ನಡೆಸಲು ಮುಂದಾಗಿದ್ದೇವೆ. ನಮ್ಮ ಹೋರಾಟದ ಮಾಹಿತಿ ಸಿಕ್ಕಿದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದು ಸೇತುವೆ ಪರೀಕ್ಷೆ ಯಂತ್ರವನ್ನು ತರಿಸಿದ್ದಾರೆ. ಇನ್ನೇನಿದ್ದರೂ ಸೇತುವೆ ಯ ಸಾಮರ್ಥ್ಯ ಪರೀಕ್ಷೆ ವರದಿ ಬಳಿಕ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲು ಚರ್ಚಿಸಲಾಗುತ್ತದೆ ಎಂದು ಚಂದ್ರಹಾಸ ಪಲ್ಲಿಪಾಡಿ ತಿಳಿಸಿದ್ದಾರೆ.

ವೇದಿಕೆಯಲ್ಲಿ ವೆಂಕಟೇಶ್ ನಾವಡ, ನೂಯಿ ಬಾಲಕೃಷ್ಣ ರಾವ್, ಚಂದ್ರ

ಹಾಸ ಪಲ್ಲಿಪಾಡಿ, ಕರಯಾಂಗಳ ಗ್ರಾ. ಪ. ಅಧ್ಯಕ್ಷ ರಾಧಾ ಲೋಕೇಶ್ ಬಡಗಬೆಳ್ಳು ರು ಗ್ರಾ. ಪ ಅಧ್ಯಕ್ಷೆ ರೂಪ, ಅಮ್ಮುoಜೆ ಗ್ರಾ ಪ. ಉಪಾಧ್ಯಕ್ಷ ರಾಧಾಕ್ರಷ್ಣ ತಂತ್ರಿ, ಕರಿಯಂಗಳ ಗ್ರಾ ಪ ಉಪಾಧ್ಯಕ್ಷ ರಾಜು ಕೋಟ್ಯಾನ್ ಗರೋಡಿ,ನವದುರ್ಗ ಬಸು ಮಾಲಕ ಶಿವ ಪ್ರಸಾದ್ ಉಪಸ್ಥಿತರಿದ್ದರು. ಸುಬ್ರಾಯ ಕಾರಂತ ಸ್ವಾಗತಿಸಿ ವಂದಿಸಿದರು.