Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಆರ್ಟ್ ಆಫ್ ಲಿವಿಂಗ್ ಸೋಷಿಯಲ್ ಪ್ರಾಜೆಕ್ಟ್ ಹಾಗೂ ಎಚ್. ಇ. ಎಫ್ ಮಹಿಳಾ ಘಟಕ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮುಳಿಯ ಜೆಸಿಐ ತರಬೇತಿ ಹಾಲ್ ನಲ್ಲಿ ನಡೆದ ಪ್ರಾಜೆಕ್ಟ್ ಶಕ್ತಿ “ ಮಹಿಳೆಯರಿಗೆ ಉದ್ಯಮಶೀಲತೆಯ ತರಬೇತಿ ಕಾರ್ಯಾಗಾರ -ಕಹಳೆ ನ್ಯೂಸ್

ಪುತ್ತೂರು: ಆರ್ಟ್ ಆಫ್ ಲಿವಿಂಗ್ ಸೋಷಿಯಲ್ ಪ್ರಾಜೆಕ್ಟ್ ಹಾಗೂ ಎಚ್. ಇ. ಎಫ್ ಮಹಿಳಾ ಘಟಕ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇವರ ಸಹಕಾರದೊಂದಿಗೆ ಪ್ರಾಜೆಕ್ಟ್ ಶಕ್ತಿ “ ಮಹಿಳೆಯರಿಗೆ ಉದ್ಯಮಶೀಲತೆಯ ತರಬೇತಿ ಕಾರ್ಯಾಗಾರವು ಮುಳಿಯ ಜೆಸಿಐ ತರಬೇತಿ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆಕಾರ್ಯದರ್ಶಿಗಳಾದ ಶ್ರೀಮತಿ. ರೂಪಾಲೇಖಾ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಎಚ್. ಇ. ಎಫ್ ಮಹಿಳಾ ಘಟಕ ಪುತ್ತೂರು ಇದರ ಅಧ್ಯಕ್ಷರಾದ ಶ್ರೀಮತಿ. ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ಆಗಮಿಸಿದ ಎಲ್ಲರಿಗೂ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಶ್ರೀಮತಿ. ರಾಜೇಶ್ವರಿ ಆಚಾರ್ ಇವರು ಶುಭ ಹಾರೈಸಿದರು.

ಜಾಹೀರಾತು

ಆರ್ಟ್ ಆಫ್ ಲಿವಿಂಗ್ ಮಂಗಳೂರಿನ ತರಬೇತುದಾರರಾದ ಶ್ರೀಮತಿ. ಅಮಿತಾ ಸುಧೀರ್ ಇವರು ಕಾರ್ಯಾಗಾರದ ಕುರಿತು ಮಾಹಿತಿ ನೀಡಿದರು.

ಎಚ್. ಇ. ಎಫ್ ಮಹಿಳಾ ಘಟಕ ಪುತ್ತೂರು ಇದರ ಕಾರ್ಯದರ್ಶಿಗಳಾದ ಶ್ರೀಮತಿ. ಮಹಾಲಕ್ಷ್ಮಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಇದರ ಕಾರ್ಯದರ್ಶಿ ಶ್ರೀಮತಿ. ವಚನ ಇವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಆರ್ಟ್ ಆಫ್ ಲಿವಿಂಗ್ ಪುತ್ತೂರು ಇದರ ಶಿಕ್ಷಕರಾದ ಶರಾವತಿ ರವಿನಾರಾಯಣ ಮಾಡಿದರು, ಎಚ್. ಇ. ಎಫ್ ಸದಸ್ಯರಾದ ಶ್ರೀಮತಿ. ಪ್ರಭಾವತಿ ಪ್ರಾರ್ಥಿಸಿದರು.

ಎಚ್. ಇ. ಎಫ್ ಪುತ್ತೂರು ಘಟಕದ ಸ್ಥಾಪಕ ಸದಸ್ಯರಾದ ಶ್ರೀ. ರವಿನಾರಾಯಣ. ಎಂ ಹಾಗೂ ಶ್ರೀ. ಶಿವರಂಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇನ್ನು ಈ ತರಬೇತಿ ಕಾರ್ಯಾಗಾರವು ಸೆಪ್ಟೆಂಬರ್ 9 ರಿಂದ 12 ರ ತನಕ ನಾಲ್ಕು ದಿನ ನಡೆಯಲಿದ್ದು, 12ರಂದು ಆರ್ಟ್ ಆಫ್ ಲಿವಿಂಗ್ ಸೋಷಿಯಲ್ ಪ್ರಾಜೆಕ್ಟ್ ನ ಬೆಂಗಳೂರಿನ ತಂಡ ಪುತ್ತೂರಿಗೆ ಆಗಮಿಸಿ ಒಂದು ದಿನದ ತರಬೇತಿಯನ್ನು ನೀಡಲಿದೆ.