Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಗಣೇಶ ಚತುರ್ಥಿ ಮತ್ತುರಾಷ್ಟ್ರೀಯ ಚಿಂತನೆಗಳು-ವಿಶೇಷ ಉಪನ್ಯಾಸ ಕಾರ್ಯಕ್ರಮ-ಕಹಳೆ ಕಹಳೆ ನ್ಯೂಸ್

ಪುತ್ತೂರು: “ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಹಬ್ಬಗಳಲ್ಲಿ ಗಣೇಶಚತುರ್ಥಿಯೂ ಒಂದಾಗಿದೆ. ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬಗಣೇಶ ಚತುರ್ಥಿ.ಬುದ್ಧಿವಂತಿಕೆಯ ಪ್ರತಿರೂಪ ಮತ್ತುಅಡೆತಡೆಗಳನ್ನು ನಿವಾರಿಸುವ ಗಣೇಶನು ಭಕ್ತರಿಗೆಮಾರ್ಗದರ್ಶನವನ್ನು ನೀಡುತ್ತಾನೆ. ಗಣೇಶ ಚತುರ್ಥಿಯ 10ದಿನಗಳ ನಂತರ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವಮೂಲಕ ನಮ್ಮಲ್ಲಿನ ಅಹಂಕಾರದ ವಿನಾಶವನ್ನು ಸೂಚಿಸುತ್ತದೆ.
ಆಚರಣೆಗಳು ಮತ್ತು ಆರಾಧನಾ ಪದ್ಧತಿಗಳು ದೈವಿಕತೆಯೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಸಹಾಯಮಾಡುತ್ತದೆ.ಏಕತೆ ಮತ್ತು ಸಾಮರಸ್ಯದ ಭಾವನೆಯನ್ನುಬೆಳೆಸುತ್ತದೆ. ಗಣೇಶನ ಆಶೀರ್ವಾದವನ್ನು ಕೋರುವ ಮೂಲಕ,ಭಕ್ತರು ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಸುಲಭವಾಗಿ ಜಯಿಸುತ್ತಾರೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಜ್ಞಾನ,ಬುದ್ಧಿವಂತಿಕೆ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ“ಎAದು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಸ್ಕಾರ ಪರಿವೀಕ್ಷಣಪ್ರಮುಖ್ ಆದ ಮೀನಾಕ್ಷಿ ಭಗಿನಿ ಇವರು ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಸೆಪ್ಟೆಂಬರ್ 9ರಂದು ನಡೆದಗಣೇಶ ಚತುರ್ಥಿ ಮತ್ತು ರಾಷ್ಟಿçÃಯ ಚಿಂತನೆಗಳು-ವಿಶೇಷಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವುಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನಸಮಾಜದಲ್ಲಿ ಸ್ವಾತಂತ್ರ‍್ಯ ಹೋರಾಟಕ್ಕಾಗಿ ಜನರನ್ನು ಒಂದೇವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯಬಿಸಿಯನ್ನೂ ಮುಟ್ಟಿಸಿತು. ಎಂದು ಹೇಳಿದರು.

ಜಾಹೀರಾತು

ಗಣೇಶೋತ್ಸವಗಳ ಮೂಲಕ ಜನರನ್ನು ಒಂದುಗೂಡಿಸಿಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳ್ಳಲು ಏಕತೆಯನ್ನುಸಾಧಿಸುವ ಬಾಲಗಂಗಾಧರ್ ತಿಲಕ್ ಅವರ ಪ್ರಯತ್ನಧರ್ಮಜಾಗೃತಿಯ ಜತೆಗೆ ಜಾತಿ, ಧರ್ಮಗಳನ್ನು ಮೀರಿದದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು.ಎಲ್ಲ ವರ್ಗದಜನರ ನಡುವೆ ಐಕ್ಯತೆ ಮೂಡಿಸುವ ಉದ್ದೇಶ ಸಾರ್ಥಕವಾಯಿತು.ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.
ಕರ‍್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸಿಂಚನಾ ಕೆ.ಎಸ್ ಇವರು ಸ್ವಾಗತಿಸಿ,ವಂದಿಸಿದರು.