Sunday, January 19, 2025
ದೆಹಲಿವಾಣಿಜ್ಯಸುದ್ದಿ

iPhone 16 ಲಾಂಚ್‌ ಬೆನ್ನಲ್ಲೇ ಆಪಲ್‌ನಿಂದ ಬಿಗ್‌ ಶಾಕ್‌!..ಈ ಜನಪ್ರಿಯ ಐಫೋನ್‌ ಸರಣಿಗಳು ಸ್ಥಗಿತ! – ಕಹಳೆ ನ್ಯೂಸ್

ಟೆಕ್ ದೈತ್ಯ ಆಪಲ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 16 ಸರಣಿಯನ್ನು (iPhone 16 Series) ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಸರಣಿಯು ಐಫೋನ್‌ 16, ಐಫೋನ್‌ 16 ಪ್ಲಸ್‌, ಐಫೋನ್‌ 16 ಪ್ರೊ ಹಾಗೂ ಐಫೋನ್‌ 16 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

ಆದರೆ ಈ ನೂತನ ಐಫೋನ್ 16 ಸರಣಿಯ ಬಿಡುಗಡೆ ಮಾಡಿರುವ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್‌ ನೀಡಿದೆ. ಆಪಲ್‌ ಸಂಸ್ಥೆಯ ಕೆಲವು ಜನಪ್ರಿಯ ಮೊಬೈಲ್‌ಗಳನ್ನು ಶಾಶ್ವತವಾಗಿ ಕ್ಲೋಸ್‌ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಆಪಲ್‌ ಕಂಪನಿಯ ಐಫೋನ್‌ 16 ಸರಣಿಯ (iPhone 16 Series) ಲಾಂಚ್ ಆಗಿದ್ದು, ಈ ಲಾಂಚ್ ಬೆನ್ನಲ್ಲೇ ಸಂಸ್ಥೆಯು ತನ್ನ ಕೆಲವು ಜನಪ್ರಿಯ ಐಫೋನ್‌ ಮಾಡೆಲ್‌ಗಳನ್ನು ಸ್ಥಗಿತಗೊಳಿಸಿದೆ. ಸಂಸ್ಥೆಯು ತನ್ನ ನಾಲ್ಕು ಪ್ರಮುಖ ಐಫೋನ್‌ಗಳು ಹಾಗೂ ವಾಚ್‌ ಸೀರಿಸ್ 9 ಅಲಭ್ಯ ಮಾಡಿದೆ. ಅದಾಗ್ಯೂ, ಸ್ಥಗಿತವಾದ ಈ ಐಫೋನ್‌ಗಳು ಹಾಗೂ ವಾಚ್‌ ಡಿವೈಸ್‌ಗಳು ಸ್ಟಾಕ್‌ ಇರುವವರೆಗೂ ಥರ್ಡ್‌ಪಾರ್ಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಗೆ ಲಭ್ಯ ಇರುತ್ತವೆ ಎಂಬುದನ್ನು ಗಮನಿಸಿ. ಹಾಗಾದರೆ ಸ್ಥಗಿತ ಆಗಿರುವ ಐಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜನಪ್ರಿಯ ಐಫೋನ್‌ಗಳು ಸ್ಥಗಿತ

* ಆಪಲ್ ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max)

* ಆಪಲ್ ಐಫೋನ್ 15 ಪ್ರೊ (iPhone 15 Pro)

* ಆಪಲ್‌ ಐಫೋನ್ 13 (iPhone 13)

* ಆಪಲ್‌ ವಾಚ್‌ ಸೀರಿಸ್‌ 9 (Watch Series 9)

ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್‌ ಫೀಚರ್ಸ್‌

ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳು ಕ್ರಮವಾಗಿ 6.3 ಇಂಚಿನ ಹಾಗೂ 6.9 ಇಂಚಿನ ಸ್ಕ್ರೀನ್‌ ಅನ್ನು ಪಡೆದಿವೆ. ಹಾಗೆಯೇ ಈ ಎರಡು ಮೊಬೈಲ್‌ಗಳು A18 Pro ಚಿಪ್‌ಸೆಟ್‌ ಪ್ರೊಸೆಸರ್‌ನಿಂದ ಕೆಲಾ ಮಾಡಲಿದ್ದು, ಎರಡನೇ ತಲೆಮಾರಿನ 3nm ಟ್ರಾನ್ಸಿಸ್ಟರ್‌ಗಳಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ಇವು A18 Pro 6-ಕೋರ್ GPU ಅನ್ನು ಪಡೆದಿದ್ದು, ಹಿಂದಿನ A17 Pro ಗಿಂತ 20% ವೇಗದ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ.

ಇನ್ನು ಈ ಎರಡು ಮೊಬೈಲ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿವೆ. ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಇವುಗಳ ಕ್ಯಾಮೆರಾಗಳು 4K120 ವಿಡಿಯೋ ಕ್ಯಾಪ್ಚರ್ ಅನ್ನು ಬೆಂಬಲಿಸುತ್ತವೆ. ಹಾಗೆಯೇ ಈ ಎರಡೂ ಪ್ರೊ ಮಾದರಿಗಳು 5x ಟೆಲಿಫೋಟೋ ಲೆನ್ಸ್‌ ಜೊತೆಗೆ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಒಳಗೊಂಡಿದ್ದು, 120mm ಫೋಕಲ್ ಉದ್ದವನ್ನು ನೀಡುತ್ತದೆ. ಇನ್ನು ಈ ಫೋನ್‌ಗಳು ಬ್ಲ್ಯಾಕ್ ಟೈಟಾನಿಯಂ, ವೈಟ್ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸ ಡಸರ್ಟ್ ಟೈಟಾನಿಯಂ ಬಣ್ಣದಲ್ಲಿ ಲಭ್ಯವಿವೆ.

iPhone 16 ಸರಣಿಯ ಬೆಲೆ ಮಾಹಿತಿ ಇಲ್ಲಿದೆ

ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ ಬೆಲೆ

ಐಫೋನ್‌ 16 ಆರಂಭಿಕ ವೇರಿಯಂಟ್‌ ದರ – 79,900ರೂ

ಐಫೋನ್‌ 16 ಪ್ಲಸ್‌ ಆರಂಭಿಕ ವೇರಿಯಂಟ್‌ ಬೆಲೆ – 89,900ರೂ

ಐಫೋನ್‌ 16 ಪ್ರೊ ಬೆಲೆ ಮಾಹಿತಿ

ಐಫೋನ್‌ 16 ಪ್ರೊ – 128GB ವೇರಿಯಂಟ್ ದರ – 1,19,900ರೂ

ಐಫೋನ್‌ 16 ಪ್ರೊ – 256GB ವೇರಿಯಂಟ್ ದರ – 1,29,900ರೂ

ಐಫೋನ್‌ 16 ಪ್ರೊ – 512GB ವೇರಿಯಂಟ್ ದರ – 1,49,900ರೂ

ಐಫೋನ್‌ 16 ಪ್ರೊ – 1TB ವೇರಿಯಂಟ್ ದರ – 1,69,900ರೂ

ಐಫೋನ್‌ 16 ಪ್ರೊ ಮ್ಯಾಕ್ಸ್‌ ಬೆಲೆ ಲಿಸ್ಟ್‌

ಐಫೋನ್‌ 16 ಪ್ರೊ ಮ್ಯಾಕ್ಸ್‌ – 256GB ವೇರಿಯಂಟ್ ಬೆಲೆ – 1,44,900ರೂ

ಐಫೋನ್‌ 16 ಪ್ರೊ ಮ್ಯಾಕ್ಸ್‌ – 512GB ವೇರಿಯಂಟ್ ಬೆಲೆ 1,64,900ರೂ

ಐಫೋನ್‌ 16 ಪ್ರೊ ಮ್ಯಾಕ್ಸ್‌ – 1TB ವೇರಿಯಂಟ್ ಬೆಲೆ 1,84,900 ರೂ

Manthesh Gizbotsource:gizbot.com