Recent Posts

Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ಪಾನೀಯ ನೀಡದಂತೆ ಮಸೀದಿಗೆ ಬರೆದ ಪತ್ರ ಭಾರೀ ವೈರಲ್ ; ಇದಕ್ಕೆ ಕಾರಣ ಕಳೆದ ವರ್ಷದ ಆ ಘಟನೆ..!! – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನ ಕೊಡಾಜೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಸ್ಥಳಗಳಲ್ಲಿ ಹಿಂದೂ ಸಮುದಾಯ ಆಚರಿಸುವ ಗಣೇಶೋತ್ಸವ ಮೆರವಣಿಗೆ ಸಂದರ್ಭ ಮುಸ್ಲಿಂ ಸಮುದಾಯ, ಸಂಘಟನೆಗಳು ಸಿಹಿತಿಂಡಿ ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದ ಘಟನೆಗಳು ನಡೆದಿದ್ದರೆ, ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದಲ್ಲಿ ಗಣೇಶೋತ್ಸವ ಆಯೋಜನೆ ಮಾಡಿರುವ ಸಮಿತಿಯೊಂದು ಸ್ಥಳೀಯ ಮಸೀದಿ ಪ್ರಮುಖರಿಗೆ ಬರೆದ ಪತ್ರವೊಂದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಬೋಳಂತೂರಿನ ಶ್ರೀ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿ ಯ ಲೆಟರ್‌ಹೆಡ್ ನಲ್ಲಿ ಬೋಳಂತೂರಿನ ಮಸೀದಿಯ ಆಡಳಿತ ಸಮಿತಿಗೆ ಕಳೆದ ಸೆ.2 ರಂದು ಈ ಪತ್ರ ಬರೆಯಲಾಗಿದೆ ಎನ್ನಲಾಗಿದ್ದು, ಕೆಳಭಾಗದಲ್ಲಿ ಯಾರದೇ ಹೆಸರು, ಹುದ್ದೆ ಉಲ್ಲೇಖಿಸದೇ ಮೊಹರು ಹಾಕಲಾಗಿದೆ. ಇದೀಗ ಈ ಪತ್ರದ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಕಳೆದ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿ ತಿಂಡಿಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗೃತೆಗಾಗಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ. ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಿಸುಗಳನ್ನು ನೀಡಬಾರದಾಗಿ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ’ ಎಂದು ಬರೆಯಲಾಗಿದ್ದು, ಈ ಪತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾತನಾಡಿರುವ ಸಮಿತಿಯ ಪ್ರಮುಖರಾದ ಜಯರಾಮ ರೈ ಅವರು, ಕಳೆದ ವರ್ಷದ ವಿದ್ಯಮಾನದ ಬಗ್ಗೆ ಕೆಲವರಿಂದ ಅಸಮಾಧಾನ ಕೇಳಿಬಂದಿತ್ತು, ಈ ಬಾರಿ ಅದು ಮರುಕಳಿಸಿದರೆ ಘರ್ಷಣೆಗೆ ಕಾರಣವಾದೀತು, ಸೌಹಾರ್ದತೆ ಕಾಯ್ದುಕೊಳ್ಳಬೇಕು ಎನ್ನುವ ಕಾರಣಕ್ಕೆ ಸಮಿತಿಯ ತೀರ್ಮಾನದಂತೆ ಮಸೀದಿ ಆಡಳತಕ್ಕೆ ಪತ್ರ ಬರೆಯಲಾಗಿತ್ತು. ಸ್ಥಳೀಯವಾಗಿ ಅವರ ಕಡೆಯಿಂದಲೂ ಸಹಕಾರ ದೊರೆತ್ತಿದ್ದು, ಈ ವರ್ಷದ ಮೆರವಣಿಗೆಯೂ ಸಂಭ್ರಮದಿಂದ ಮುಗಿದಿದೆ. ಇದನ್ನು ಮತ್ತೆ ವಿವಾದವಾಗಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.