Friday, November 22, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿಶ್ರಾಂತ ಪ್ರಾಧ್ಯಾಪಕ ಡಾ.ವಿಷ್ಣು ಭಟ್ ಎರಡು ಕೃತಿಗಳು ಲೋಕಾರ್ಪಣೆ ಸಮಾಜಮುಖಿಯಾದ ಕಾರ್ಯಕ್ರಮವೇ ರೋಟರಿ ಉದ್ದೇಶ : ಡಾ. ರವಿಪ್ರಕಾಶ್-ಕಹಳೆ ನ್ಯೂಸ್

ಪುತ್ತೂರು: ಸಮಾಜಮುಖಿಯಾದ ಕಾರ್ಯಕ್ರಮಗಳು, ವಿಚಾರ ಮಂಡನೆಗಳು ರೋಟರಿಯ ಮುಖ್ಯ ಉದ್ದೇಶವಾಗಿದೆ. ಅಂತಹ ಕಾರ್ಯಗಳಲ್ಲಿ ಪುಸ್ತಕ ಬಿಡುಗಡೆಯೂ ಒಂದು. ಉಪನಿಷತ್ತುಗಳನ್ನು ವೇದಾಂತ ಎಂದು ಕರೆಯುತ್ತಾರೆ. ಹಿಂದು ಸನತಾನದ ಧರ್ಮದ ಅಧ್ಯಯನಕ್ಕೆ ಉಪನಿಷತ್ ಬಹಳ ಅತ್ಯಗತ್ಯ. ಈ ನೆಲೆಯಲ್ಲಿ ಡಾ.ವಿಷ್ಣು ಭಟ್ ಅವರ ಕೃತಿಗಳು ಮೌಲಿಕವಾದದ್ದು ಎಂದು ಡಾ.ರವಿಪ್ರಕಾಶ್ ಅವರು ಹೇಳಿದರು.

ಕನ್ನಡಕ್ಕೆ ಅನುವಾದಗೊಂಡ ಡಾ.ಕೆ ವಿಷ್ಣುಭಟ್ ಅವರ ಮಾಂಡೂಕ್ಯೋಪನಿಷದ್ – ಗೌಡಪಾದಕಾರಿಕಾ ಪುಸ್ತಕ ಮತ್ತು ಅದ್ವೆöÊತ ಮತ್ತು ಇತರ ಹತ್ತು ಲೇಖನಗಳನ್ನೊಳಗೊಂಡ ಪುಸ್ತಕಗಳು ಸೋಮವಾರ ರೋಟರಿ ಮನೀಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ನೇತೃತ್ವದಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪದ್ಯದ ರೂಪದಲ್ಲಿ ವಿವರಣೆ ನೀಡಿದ ಅರ್ತಿಕಜೆ:
ಹಿರಿಯ ಸಾಹಿತಿ ಪ್ರೊ.ವಿ ಬಿ ಅರ್ತಿಕಜೆ ಅವರು ಮಾಂಡೊಕ್ಯೋಪನಿಷದ್-ಗೌಡಪಾದಕಾರಿಕ (ಕನ್ನಡ ಭಾಷಾಂತರ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಡಾ ವಿಷ್ಣು ಭಟ್ ಅವರು ಶೈಕ್ಷಣಿಕವಾಗಿ ಗಳಿಸಿದ ಪದವಿಗಳೇ ಸಾಕಷ್ಟಿರುವುದರಿಂದ ಅವರು ಕೇವಲ ವಿಷ್ಣುವಲ್ಲ ಮಹಾವಿಷ್ಣು, ಅವರೊಬ್ಬ ಅದ್ಭುತ ಶಕ್ತಿ ಎಂದು ಹೇಳಿ ಅವರ ಕೃತಿಯನ್ನು ಪದ್ಯದ ರೂಪದಲ್ಲಿ ವಿವರಣೆ ನೀಡಿದರು. ಪುಸ್ತಕ ಸಣ್ಣದು ಆದರೆ ಅದರ ಒಳಗಿರುವ ಮೌಲ್ಯ ಬಹಳ ದೊಡ್ಡದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭ್ರಷ್ಟಾಚಾರದ ಬಗ್ಗೆಯೂ ಉಲ್ಲೇಖ:
ವಿಶ್ರಾಂತ ಪ್ರಾಂಶುಪಾಲ ಪ್ರೊ| ಡಾ. ಎನ್. ಪರಮೇಶ್ವರ ಭಟ್ ಅವರು ಅದ್ವೇತ ಮತ್ತು ಇತರ ಹತ್ತು ಲೇಖನಗಳು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ ಪುಸ್ತಕದ ಒಳಗಿರುವ ವಿಷಯ ಬಹಳ ಗಹನವಾಗಿದೆ. ಡಾ. ವಿಷ್ಣು ಭಟ್‌ಅವರು ಜೀವನದಲ್ಲಿ ಬಹಳ ಕಷ್ಟಪಟ್ಟವರು ಅದನ್ನು ಅವರು ಪುಸ್ತಕದಲ್ಲಿ ಎಲ್ಲೂ ತೋರಿಸದಿದ್ದರೂ ಅವರು ಅನುಭವಿಸಿದ ಕಷ್ಟ ಗೊತ್ತಾಗುತ್ತಾದೆ. ಇವರೊಬ್ಬ ಗಾಂಧೀಜಿಯAತೆ ಎಂದ ಅವರು ಯುವ ಜನಾಂಗ ಬೇರೆ ದಾರಿಹಿಡಿದಾಗ, ಭ್ರಷ್ಟಾಚಾರದ ಬಗ್ಗೆ ಉಲ್ಲೇಖದಲ್ಲಿ ದಕ್ಷಿಣ ಕೊಟ್ಟರೆ ಕೆಲಸ ಆಗುತ್ತದೆ. ಇದು ಪ್ರತಿಯೊಬ್ಬರಿಗೂ ಅನುಭವ ಎಂದು ತಿಳಿಸಿದ್ದಾರೆ ಎಂದರು.