ಪುತ್ತೂರು: ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯಗಳ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಬೇಕು ಅದಕ್ಕಾಗಿ ಆ ವಿಷಯಗಳ ಬಗ್ಗೆ ಅಪಾರ ಅನುಭವವನ್ನು ಹೊಂದಿರುವ ತಜ್ಞರ ಸಹಕಾರವನ್ನು ಪಡೆದುಕೊಳ್ಳಬೇಕು ಎಂದು ಎನ್‌ಐಟಿಕೆ ಸುರತ್ಕಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ.ಅಣ್ಣಪ್ಪ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿAಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಮ್ಯಾನೇಜ್ಮೆಂಟ್, ಇಂಜಿನಿಯರಿAಗ್, ವಿಜ್ಞಾನ ಮತ್ತು ತಂತ್ರಜ್ಞಾನಗಳ ಹೊಸಯುಗದ ಅನಾವರಣದ ಅಂತಾರಾಷ್ಟಿçÃಯ ಸಮ್ಮೇಳನ ದೃಷ್ಟಿ-2024 ಇದರ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದರು. ಪ್ರಸಕ್ತ ಸನ್ನಿವೇಶದಲ್ಲಿ ಕಾರ್ಪೋರೇಟ್ ಕಂಪೆನಿಗಳು ಅಂಕಗಳ ಪರಿಗಣನೆಗಿಂತ ನಿಗದಿತ ವಿಷಯಗಳ ಬಗ್ಗೆ ಹೊಂದಿರುವ ಪರಿಣತಿಯನ್ನು ಗಮನಿಸುತ್ತವೆ ಎಂದರು. ಇಂತಹ ಸಮ್ಮೇಳನಗಳು ಹೊಸ ಹೊಸ ವಿಷಯಗಳ ತಿಳುವಳಿಕೆಗೆ ಸಹಕಾರಿಯಾಗುತ್ತದೆ ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ವಿನೀರ್ ಇಂಟರ್ನೇಶನಲ್ ಕನ್ಸಲ್‌ಟೆನ್ಸಿ ಮಂಗಳೂರು ಇದರ sಸಹಸಂಸ್ಥಾಪಕ ಮೆಲ್ವಿನ್ ಸಿಕ್ವೇರಾ ಮಾತನಾಡಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಕಲಿತುಕೊಳ್ಳುವುದು ಅತೀ ಅಗತ್ಯ ಇಲ್ಲವಾದರೆ ನಾವು ಬಹಳ ಹಿಂದುಳಿಯುತ್ತೇವೆ. ನಾವು ಕಲಿತುಕೊಂಡು ಅದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲಪಿಸುವ ಕಾರ್ಯ ನಮ್ಮಿಂದ ನಡೆಯಬೇಕು ಎಂದರು.
ಆನ್ಲೆöÊನ್ ಮೂಲಕ ಸಮಾರಂಭದಲ್ಲಿ ಉಪಸ್ಥಿತರಿದ್ದ ಟೀಂ ನೆಕ್ಟ್ ಎಲ್‌ಎಲ್‌ಸಿ ಜಪಾನ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಯೂಮಿ ಕಾಕ್ಸ್, ಡೈಕಿನ್ ಯುನಿವರ್ಸಿಟಿ ಆಸ್ಟೆçÃಲಿಯಾ ಇದರ ಬ್ಯುಸಿನೆಸ್ ಮೆನೇಜ್ಮೆಂಟ್ ವಿಭಾಗದ ವ್ಯವಸ್ಥಾಪಕ ಶಿಜೊಮೊನ್ ಯೇಸುದಾಸ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕಾಮರ್ಸ್ ವಿಭಾಗದ ಅಧ್ಯಕ್ಷೆ ಡಾ.ಪ್ರೀತಿ ಕೀರ್ತಿ ಡಿ’ಸೋಜ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ ಸಮುದ್ರ ಮಥನದ ಕಾಲದಲ್ಲಿ ಅಮೃತದ ಜತೆ ಹಾಲಾಹಲವೂ ಉದ್ಭವಿಸಿತ್ತು, ಹಾಗೆಯೇ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಒಳ್ಳೆಯದೂ ಇದೆ ಕೆಟ್ಟದ್ದೂ ಇದೆ. ಇದನ್ನು ತಿಳಿದು ಬಳಸುವ ಚಾಕಚಕ್ಯತೆ ನಮ್ಮಲ್ಲಿರಬೇಕು ಎಂದರು. ಉತ್ತಮವಾದದ್ದನ್ನು ಮನುಕುಲದ ಒಳಿತಿಗಾಗಿ ಬಳಸಿ ಸದೃಢ ರಾಷ್ಟç ನಿರ್ಮಾಣದ ರೂವಾರಿಗಳಾಗಬೇಕೆಂದು ಹಾರೈಸಿದರು.
ಆನ್ಲೆöÊನ್ ಹಾಗೂ ಆಫ್ಲೆöÊನ್ ಮೂಲಕ 224 ಸಂಶೋಧನಾ ಪ್ರಬಂಧಗಳನ್ನು ಸ್ವೀಕರಿಸಲಾಗಿದ್ದು, ಇವೆಲ್ಲವನ್ನೂ ಒಟ್ಟು ಸೇರಿಸಿ ಮುದ್ರಿಸಲಾದ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಕಾರ್ಯಕ್ರಮ ಸಂಯೋಜಕ ಡಾ. ರಾಬಿನ್ ಮನೋಹರ್ ಶಿಂಧೆ ಸಹ ಸಂಯೋಜಕಿ ಡಾ.ಜೀವಿತಾ.ಬಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಮಹೇಶ್‌ಪ್ರಸನ್ನ.ಕೆ ಸ್ವಾಗತಿಸಿ. ಡಾ.ಜೀವಿತಾ.ಬಿ.ಕೆ ವಂದಿಸಿದರು. ಪ್ರೊ.ನೀಮಾ.ಎಚ್ ಹಾಗೂ ಪ್ರೊ.ಮೇಘ ಕಾರ್ಯಕ್ರಮ ನಿರ್ವಹಿಸಿದರು. ಡಾ.ರಾಜೇಶ್ ಮತ್ತು ಪ್ರೊ.ರೇಶ್ಮಾ ಪೈ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು.