” ಶ್ರೀ ಗೋಪಾಲಕೃಷ್ಣ “
ಜಯ ಜಯ ಶ್ರೀ ಗೋಪಾಲಕೃಷ್ಣ l
ಕರಮುಗಿವೆ ದೇವ ಶ್ರೀ
ಬಾಲಕೃಷ್ಣ l
ಮೈ ನೋಟವೇನದು ಮುರಳೀಲೋಲ l
ಮೈ ನವಿರೇಳಿಸುವ ಮಾಯಾಜಾಲ ll೧ll
ನೀನಿಂತ ನಿಲುವೇನು
ದೇವಕಿಕಂದ l
ಶ್ರೀಕಾಂತ ಶ್ರೀ ಲೋಲ ಗೋ ಗೋಪವೃದ ll
ಅವಲಕ್ಕಿ ಬೇಲೇನೋ ಹೇ ಗೋವಿಂದ l
ನವನೀತ ತಂದಿರುವೆ ಪರಮಾನಂದ ll೨ll
ನಟರಾಜನು ನೀನೇ ಹೇ ನಾಟ್ಯಲೋಲ l
ತಕದಿಮಿ ತರಿಕೀಟ ತಾಳ ತಪ್ಪಿಲ್ಲ ll
ಮೊಸರನ್ನ ಉಣ್ಣುವ ಬಾಲಕಿಶೋರ l
ಕಡಗೋಲ ಪಿಡಿದಿಹ ನಂದಕುಮಾರ ll೩ll
ಲಕ್ಷ್ಮೀಯ ದೊರಕಿಸು ರುಕ್ಮಿಣಿ ಪತಿಯೆ ll
ಪಕ್ಷಿವಾಹನನೆ ಭಾಮೆಯ ಪತಿಯೆ ll
ಲಕ್ಷಣವಾಗಿಹೆ ತಕ್ಷಣ ಒಲಿಯೆ l
ಈಕ್ಷಿಸು ದೇವಾ ಈ
ಜಗರಕ್ಷಕನೆ ll೪ll
ನನ್ನದೇನಿದೆ ದೇವಾ ಎಲ್ಲವು ನಿನ್ನದೆ l
ಭಕ್ತಿ ನಿನದಿರದಿರೆ ಶಕ್ತಿಯು ಎಲ್ಲಿದೆ ll
ಕೋಮುಲಾಂಗನೆ ನೀನು ಸರಪಿಜನಾಭ l
ಕ್ಷೀರವಾರಿಧಿಶಯದ ಹೇ ಪದುಮನಾಭ ll೫ll
ಮುತ್ತು ಉದುರಿತಿದೆ ಬಾಯೊಳಗಿಂದ ll
ಮೂಜಗ ತೋರಿದ ಬಾಲ ಮುಕುಂದ l
ಭಯ ಭಯ ಹರನೇ ಸೇತು ಮಾಧವನೆ l
ಕಲಿಯುಗವರದ ಕಮಲಸಂಭವನೆ ll೬ll