Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸ್ವಾಮಿ ವಿವೇ ಕಾನಂದರ ಪ್ರೇರಣೆ ಪ್ರತೀ ವಿದ್ಯಾರ್ಥಿಗಳ ಹೃದಯವನ್ನು ಬೆಳಗಲಿ :ಚಕ್ರವರ್ತಿ ಸೂಲಿಬೆಲೆ-ಕಹಳೆ ನ್ಯೂಸ್

ಪುತ್ತೂರು: “ಸಿಂಹಸದೃಶವಾದ ಹಿಂದೂ ಧರ್ಮ ಕ್ಕೆ ಪುನರ್ಜನ್ಮವನ್ನು ನೀಡಿದವರು ಸ್ವಾಮಿ ವಿವೇಕಾನಂದರು . ಹಿಂದೂಧರ್ಮ ವೆಂದರೆ ಅತ್ಯಂತ ಪ್ರಾಚೀನವ ದ, ಶ್ರೇಷ್ಠವಾದ ಧರ್ಮ ಎಂದು ಜಗತ್ತಿನ ಕಣ್ಣಿನಲ್ಲಿ ಸಾಕ್ಷೀ ಕರಿಸಿದವರು ಸ್ವಾಮಿ ವಿವಕಾನಂದರು . ವ್ಯಕ್ತಿತ್ವದ ಅಮೂಲಾಗ್ರ ಬದಲಾ ವಣೆಯಾಗಲು ವಿವೇಕಾನಂದರ ಜೀವನವನ್ನು ಓದಿ ಪ್ರೇರಣೆಗೊಳ್ಳಬೇಕು . ಈ ಮಹಾನ್ ಸಂತನನ್ನು ಅಧ್ಯಯನ ಮಾಡಿದವರು , ಅವರನ್ನು ಹೃದಯದಲ್ಲಿ ಇರಿಸಿಕೊಂ ಡವರು ಎಂದಿಗೂ ಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಅವರಮಾತಿನ ಪ್ರೇರಣೆ ಪ್ರತೀ ವ್ಯಕ್ತಿತ್ವವನ್ನು ಬೆಳಗಿ, ಅಂತ:ಶಕ್ತಿಯನ್ನು ಜಾಗೃತಗೊಳಿಸಬಲ್ಲದು .” ಎಂದು ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿಸೂಲಿಬೆಲೆ ಅವರು ನುಡಿದರು . ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 131ನೇ ವರ್ಷಾಚರಣೆಯ ಪ್ರಯು ಕ್ತಹಮ್ಮಿ ಕೊಳ್ಳಲಾದ ವಿವೇಕ ವಿಜಯʼ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದರು . ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಕೆ.ಎಮ್. ಕೃಷ್ಣ ಭಟ್ ಇವರು ದೀಪಪ್ರ ಜ್ವಲನೆಯ ಮೂಲಕ ಉದ್ಘಾ ಟಿಸಿದರು .

ವಿವೇಕ- ವಿಜಯ ಉಪನ್ಯಾಸ ಕಾರ್ಯ ಕ್ರಮದ ಮೊದಲ ಹಂತವಾಗಿ ವಿದ್ಯಾರ್ಥಿಗಳಿಗಾಗಿ “ವಿವೇಕ ಚಿಂತನ-ಭಾರತ ವಂದನಾ ” ಶೀರ್ಷಿಕೆಯಡಿ ಉಪನ್ಯಾ ಸಕಾರ್ಯಕ್ರಮವನ್ನು ಚಕ್ರವರ್ತಿ ಸೂಲಿಬೆಲೆ ಅವರು ನಡೆಸಿಕೊಟ್ಟರು . ವಿದ್ಯಾರ್ಥಿಗಳನ್ನುದ್ದೇಶಿಸಿ ದಿಕ್ಸೂಚಿಮಾತುಗಳನ್ನಾಡುತ್ತಾ , “ಇಂದಿನ ಪೀಳಿಗೆಯು ಆವಶ್ಯವಾಗಿ ಸ್ವಾಮಿ ವಿವೇಕಾನಂದರ ಕೇಂದ್ರ ಕೃತ ಜೀವನಶೈಲಿ ಹಾಗೂ ಇಚ್ಛಾ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು . ವಿವೇಕಾನಂದರು ಚಿಕಾ ಗೋದಲ್ಲಿ ನಡೆಸಿದ ಉಪನ್ಯಾಸದ 131ನೇ ವರ್ಷಾಚರಣೆಯ ಈ ದಿನವು ಪ್ರತೀ ವಿದ್ಯಾರ್ಥಿಯಲ್ಲಿಯೂ ಸಂಕಲ್ಪದಿನವಾಗಲಿ. ವಿದ್ಯಾರ್ಥಿ/ಗಳು ತಮ್ಮ ಹೃದಯಗಳನ್ನು ತೆರೆದು ಈ ದೇಶ ಸಾಗುತ್ತಿರುವ ಹಾದಿಯನ್ನು ಮನದಟ್ಟು ಮಾಡಿಕೊಂಡು , ತಮ್ಮ ಜೀವನ ಪಥವನ್ನು ಸ್ಪಷ್ಟ ಪಡಿಸಿಕೊಳ್ಳುವ ಆವಶ್ಯಕತೆ ಇದೆ.” ಎಂದರು . ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ರಾವ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ .ಪಿ ಇವರು ಉಪಸ್ಥಿತರಿದ್ದರು . ಕಾರ್ಯಕ್ರಮದಲ್ಲಿ ವಿವೇಕ ನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿಗಳಾದ ರೂಪಲೇಖ, ವಿವೇಕಾನಂದ ಪದವಿಪೂ ರ್ವಕಾಲೇಜಿನ ಆಡಳಿತಮಂಡಳಿ ಸದಸ್ಯರಾದ ಡಾ | ಕೆ.ಎನ್ಸುಬ್ರಹ್ಮಣ್ಯ , ವತ್ಸಲಾ ರಾಜ್ಞಿ, ಡಾ | ಕೃಷ್ಣ ಪ್ರಸನ್ನ , ಕೋಶ ಧಿಕಾರಿಗಳಾದ ಸಚಿನ್ ಶೆಣೈ , ಸಂಸ್ಥೆಯ ಪ್ರಾಂಶು ಪಾಲರಾದ ಮಹಶ್ ನಿಟಿಲಾಪುರ, ಉಪಪ್ರಾಂ ಶುಪಾಲರಾದ ಎಮ್. ದೇವಿಚರಣ್ ರೈ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು .

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರೇರಣಾಗೀತೆಯಾಗಿ ಸನ್ಯ ಸಿ ಗೀತೆಯನ್ನು ಹಾಡಿದರು . ದ್ವಿತೀ ಯ ಪಿಯು ಸಿ ವಿದ್ಯಾರ್ಥಿನಿಯರು ಪ್ರಾ ರ್ಥಿ ಸಿದರು . ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ರವೀಂದ್ರ ಪಿ ಇವರು ಪ್ರಾಸ್ತಾವಿಕನುಡಿಗಳೊಂದಿಗೆ ಸ್ವಾಗತಿಸಿದರು . ಉಪನ್ಯಾಸಕಿ ದಿವ್ಯಾ ಕೆ ಇವರು ವಂದಿಸಿದರು . ಉಪನ್ಯಾಸಕಿ ಮಮತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂ ಪಿಸಿದರು

ಜಾಹೀರಾತು