Recent Posts

Sunday, January 19, 2025
ಸುದ್ದಿ

ಪುತ್ತೂರು ಸ್ಕೂಟರ್ ಅಪಘಾತ : ಗಂಭೀರ ಗಾಯಗೊಂಡಿದ್ದ ವಿ.ಹಿಂ.ಪ. ಬಜರಂಗದಳ ಕಾರ್ಯಕರ್ತ ಕೀರ್ತನ್ ನಿಧನ..!-ಕಹಳೆ ನ್ಯೂಸ್

ಪುತ್ತೂರು : ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕೆಯೂರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರವರ ಪುತ್ರ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ವೀರಾಂಜನೇಯ ಘಟಕ ತಿಂಗಳಾಡಿಯ ಸಹ ಗೋ ರಕ್ಷಕ ಪ್ರಮುಖ್ ಕೀರ್ತನ್ ಗೌಡ (22) ಮೃತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೆ.10 ರಂದು ಮಧ್ಯರಾತ್ರಿ ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿ ಸ್ಕೂಟರ್ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಕೀರ್ತನ್ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು