Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

“ಬಾಂಗ್ಲಾ ವಿದ್ಯಮಾನಗಳು ಮತ್ತು ಭಾರತ” ವಿಷಯದ ಕುರಿತಾದ ವಿಶೇಷ ಸಂವಾದ ಕಾರ್ಯಕ್ರಮ.-ಕಹಳೆ ನ್ಯೂಸ್

ಪುತ್ತೂರು :ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಅರಾಜಕತೆ, ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಬಾಂಗ್ಲಾದಲ್ಲಿ ನಡೆದ ಈ ರೀತಿಯ ಘಟನೆಗಳಿಂದ ಅನೇಕ ಬಾರಿ ಪ್ರತಿ ಆವೇಶಗಳು ನಿರ್ಮಾಣಗೊಂಡಿರುವುದನ್ನು ನಾವು ಕಂಡಿದ್ದೇವೆ. ಆದರೆ ಈ ಬಾರಿ ನಡೆದಿರುವಂತಹ ಘಟನೆ ಯಾರೂ ಒಪ್ಪತಕ್ಕದ್ದಲ್ಲ. ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಬಂದ 4 ವರ್ಷಗಳಲ್ಲಿ ಅಲ್ಲಿನ ಹಿಂದುಗಳ ಸಂಖ್ಯೆ ಹೆಚ್ಚು ಕಡಿಮೆ 22% ಆಗಿತ್ತು. ಇವತ್ತು ಅಲ್ಲಿನ ಹಿಂದುಗಳ ಸಂಖ್ಯೆ 7%ಗೆ ಇಳಿದಿರುವುದು ಪರಿಸ್ಥಿತಿಯ ಗಾಂಭೀರ್ಯತೆಯನ್ನು ತಿಳಿಸಿಕೊಡುತ್ತದೆ.” ಎಂದು ಖ್ಯಾತ ವಾಗ್ಮಿಗಳು ಹಾಗೂ ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಇವರು ಅಭಿಪ್ರಾಯಪಟ್ಟರು.

“ಬಾಂಗ್ಲಾ ವಿದ್ಯಮಾನಗಳು ಮತ್ತು ಭಾರತ” ವಿಷಯದ ಕುರಿತು ಪುತ್ತೂರು ಸಿಟಿಝನ್ ಫೋರಮ್ ನೇತೃತ್ವದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ, ವಿಶೇಷ ಆಹ್ವಾನಿತರಿಗಾಗಿ ನಡೆಸಲಾದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಇವರು ಮಾತನಾಡಿದರು. “ಬಾಂಗ್ಲಾದಲ್ಲಿ ಇಷ್ಟರಮಟ್ಟಿಗೆ ಹಿಂಸೆ, ನರಮೇಧ ನಡೆದರೂ ಭಾರತದಲ್ಲಿ ಈ ಘಟನೆಗಳನ್ನು ಸಮರ್ಥಿಸಿಕೊಳ್ಳುವವರಿದ್ದಾರೆ ಎನ್ನುವುದು ಅತ್ಯಂತ ವಿಷಾದದ ಸಂಗತಿ. ಭಾರತದ ಅಡಳಿತ ವ್ಯವಸ್ಥೆಯ ಬಗ್ಗೆ ವಿದೇಶಗಳಲ್ಲಿ ಕೂಗು ಎಬ್ಬಿಸುತ್ತಾ ಭಾರತ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಹಾಗೂ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚುವ ಪ್ರಯತ್ನಗಳನ್ನು ನಡೆಸುತ್ತಿರುವವರ ವಿರುದ್ಧ ನಾವು ಇಂದು ಎಚ್ಚರಿಕೆಯಿಂದ ಇರಬೇಕಾಗಿದೆ. ಬಾಂಗ್ಲಾ ದೇಶದಲ್ಲಿ ನಡೆದ ಘಟನೆ ಇಂದು ನಮಗೆ ಪಾಠ ಆಗಬೇಕಾಗಿದೆ. ನಮ್ಮ ರಕ್ಷಣೆಗೆ ನಾವು ಸಿದ್ಧರಾಗಬೇಕಿದೆ, ಆತ್ಮರಕ್ಷಣೆಗೆ ಬೇಕಾದ ತಯಾರಿಯನ್ನು ನಡೆಸಬೇಕಾಗಿದೆ” ಎಂದು ಎಚ್ಚರಿಕೆಯನ್ನಿತ್ತರು. ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಅಖಂಡತೆಯನ್ನು ಕೇಂದ್ರೀಕರಿಸಿ ನಡೆದ ಈ ಸಂವಾದದಲ್ಲಿ ಹಲವು ವಿಶೇಷ ಆಹ್ವಾನಿತರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀಕಾಂತ್ ಬಿ ಆಚಾರ್ಯ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್, ಪುತ್ತೂರು ಇವರು ಉಪಸ್ಥಿತರಿದ್ದರು. ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್ನ ನಿರ್ದೇಶಕರಾದ ಅನಿಲಾ ದೀಪಕ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಲಕ್ಷ್ಮೀಕಾಂತ್ ಬಿ ಆಚಾರ್ಯ ಇವರು ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು