Sunday, January 19, 2025
ದಕ್ಷಿಣ ಕನ್ನಡಮಂಗಳೂರುರಾಜ್ಯಸುದ್ದಿ

ಈದ್ ಮಿಲಾದ್ ದಿನ ನಾವೂ ದಾಳಿ ಮಾಡಿದ್ರೆ ಹೇಗಿರುತ್ತೆ : ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಎಚ್ಚರಿಕೆ – ಕಹಳೆ ನ್ಯೂಸ್

ಮಂಗಳೂರು: ಮಂಡ್ಯದ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕೋಮುಗಲಭೆಗೆ ಪ್ರತ್ಯುತ್ತರ ನೀಡುವ ಭರದಲ್ಲಿ ಹಿಂದೂ ಮುಖಂಡ  ಶರಣ್ ಪಂಪ್ ವೆಲ್  ಹೇಳಿಕೆ ನೀಡಿದ್ದಾರೆ.

ನಾಗಮಂಗಲದಲ್ಲಿ ಗಣೇಶ ಹಬ್ಬದ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿ ಗಲಭೆಗೆ ಕಾರಣರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಈ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಮಂಗಳೂರಿನಲ್ಲಿ ವಿಎಚ್ ಪಿ ಸಂಘಟನೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ಶರಣ್ ಪಂಪ್ ವೆಲ್ ಈದ್ ಮಿಲಾದ್ ಮೆರವಣಿಗೆ ವೇಳೆ ನಾವು ದಾಳಿ ಮಾಡಿದರೆ ಹೇಗಿರುತ್ತದೆ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಎಚ್ ಪಿ ಧರಣಿ ವೇಳೆ ಮಾತನಾಡಿದ ಶರಣ್ ಪಂಪ್ ವೆಲ್ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳೆಲ್ಲಾ ಒಟ್ಟಾಗಿ ದಾಳಿ ಮಾಡಿದರೆ ಏನಾಗಬಹುದು ಎಂದು ಊಹೆ ಇದೆಯಾ ಎಂದಿದ್ದಾರೆ. ಹೀಗಾಗಿ ನಿನ್ನೆಯ ದಾಳಿಕೋರರಿಗೆ ಎಚ್ಚರಿಕೆ ಸಂದೇಶ ಕೊಡುತ್ತಿದ್ದೇವೆ. ಸರ್ಕಾರ ಈದ್ ಕಾರ್ಯಕ್ರಮಕ್ಕೂ ಅನುಮತಿ ನೀಡಬಾರದು. ಈದ್ ನೆಪದಲ್ಲೂ ದಾಳಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ಗಲಭೆಯಲ್ಲಿ ಪಿಎಸ್‌ಐ ಕೈವಾಡದ ಶಂಕೆಯಿದೆ. ರಾಜ್ಯ ಸರ್ಕಾರಕ್ಕೆ ನಮ್ಮ ಮೆರವಣಿಗೆಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲದಿದ್ದರೆ ಹೇಳಲಿ. ನಾವು ಕೇಂದ್ರದಿಂದ ಮಿಲಿಟರಿ ಕರೆಸುತ್ತೇವೆ. ಈದ್ ಮಿಲಾದ್ ಗೆ ರಾಜ್ಯ ಸರ್ಕಾರ ಒಪ್ಪಿಗೆ ಕೊಡಬಾರದು. ಕೊಟ್ಟರೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಪ್ರಚೋದನಕಾರೀ ಹೇಳಿಕೆ ನೀಡಿದ್ದಾರೆ.