Recent Posts

Friday, November 22, 2024
ಸುದ್ದಿ

ಪ್ರಧಾನಿ ನರೇಂದ್ರ ಮೋದಿಯವರ 74ನೇ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ಧತೆ ; ಅಜ್ಮೀರ್ ದರ್ಗಾದಲ್ಲಿ ಸಸ್ಯಾಹಾರ ಅನ್ನದಾಸೋಹಕ್ಕೆ ವಿಶೇಷ ಸಿದ್ಧತೆ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 2024 ರಂದು ತಮ್ಮ 74 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅಜ್ಮೀರ್ ಶರೀಫ್ ದರ್ಗಾ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪ್ರಧಾನಿ ಮೋದಿಯವರ 74 ನೇ ಹುಟ್ಟುಹಬ್ಬದ ಅಂಗವಾಗಿ ಅಜ್ಮೀರ್ ಷರೀಫ್ ದರ್ಗಾವು 4000 ಕೆಜಿ ಸಸ್ಯಾಹಾರಿ “ಲಂಗರ್” ಆಹಾರವನ್ನು ತಯಾರಿಸಿ ವಿತರಿಸುವುದಾಗಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಆಚರಣೆ ಮತ್ತು “ಸೇವಾ ಪಖ್ವಾಡಾ” ಆಚರಣೆಯ ಅಂಗವಾಗಿ, ಅಜ್ಮೀರ್ ದರ್ಗಾ ಷರೀಫ್‌ನಲ್ಲಿರುವ ಐತಿಹಾಸಿಕ ಮತ್ತು ವಿಶ್ವಪ್ರಸಿದ್ಧ “ಬಿಗ್ ಶಾಹಿ ದೇಗ್” ಅನ್ನು ಮತ್ತೊಮ್ಮೆ 4000 ಕೆಜಿ ಸಸ್ಯಾಹಾರಿ “ಲಂಗರ್” ಆಹಾರವನ್ನು ತಯಾರಿಸಲು ಮತ್ತು ವಿತರಿಸಲು ಬಳಸಲಾಗುತ್ತಿದೆ” ಎಂದು ಹೇಳಲಾಗಿದೆ. ಇದು 550 ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದೆ” ಎಂದು ದರ್ಗಾ ಅಧಿಕಾರಿಗಳು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಬಗ್ಗೆ ಅಜ್ಮೀರ್ ಷರೀಫ್ ದರ್ಗಾದ ಅಧಿಕಾರಿಗಳು ಮಾತನಾಡಿದ್ದು, ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ 4 ಸಾವಿರ ಕೆಜಿ ಸಸ್ಯಾಹಾರಿ ಆಹಾರವನ್ನು ತಯಾರಿಸಿ, ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಹೇಳಿದರು.

ಹೇಗಿರಲಿದೆ ಆಹಾರ?

ಇನ್ನು ಆಚರಣೆ ಬಗ್ಗೆ ದರ್ಗಾದ ಗಡ್ಡಿ ನಾಶಿನ್, ಸೈಯದ್ ಅಫ್ಶಾನ್ ಚಿಶ್ತಿ ಅವರು ಮಾತನಾಡಿದ್ದು, ಊಟವು ಅಕ್ಕಿ, ಶುದ್ಧ ತುಪ್ಪ ಮತ್ತು ಡ್ರೈ ಫ್ರೂಟ್ಸ್​​ಗಳನ್ನು ಒಳಗೊಂಡಿರುತ್ತದೆ ಎಂದು ವಿವರಿಸಿದರು. ಎಎನ್‌ಐ ಜೊತೆ ಮಾತನಾಡಿದ ಚಿಶ್ಟಿ, “ಪಿಎಂ ಮೋದಿ ಹುಟ್ಟುಹಬ್ಬದ ಸಂದರ್ಭದಲ್ಲಿ, ದೇಶದ ಹಲವು ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅವರ ಜನ್ಮದಿನದ ಸಂದರ್ಭದಲ್ಲಿ ನಾವು 4,000 ಕೆಜಿ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತೇವೆ. ಅಕ್ಕಿ ಮತ್ತು ಶುದ್ಧ ತುಪ್ಪ, ಒಣ ಹಣ್ಣುಗಳನ್ನು ಸಹ ಇಲ್ಲಿ ವಿತರಿಸಲಾಗುತ್ತದೆ ಮತ್ತು ಇದರೊಂದಿಗೆ ನಮ್ಮ ಸುತ್ತಮುತ್ತಲಿನ ಗುರುಗಳು ಮತ್ತು ಬಡವರಿಗೆ ಸೇವೆಯ ರೂಪದಲ್ಲಿ ಆಹಾರವನ್ನು (ಲಂಗರ್​) ನೀಡಲಾಗುತ್ತದೆ ಎಂದು ಹೇಳಿದರು.

ಅಜ್ಮೀರ್ ಶರೀಫ್ ದರ್ಗಾ ಮತ್ತು ಪ್ರಧಾನಿ ಮೋದಿ

ಇಂಡಿಯನ್ ಮೈನಾರಿಟಿ ಫೌಂಡೇಶನ್ ಮತ್ತು ಅಜ್ಮೀರ್ ಷರೀಫ್‌ನ ಚಿಶ್ಟಿ ಫೌಂಡೇಶನ್ ಆಯೋಜಿಸುವ ಈ ಕಾರ್ಯಕ್ರಮವು ಭೋಜನ ವಿತರಣೆಯನ್ನು ಮಾಡುವುದಲ್ಲದೆ, ಪ್ರಧಾನಿ ಮೋದಿಯವರ ದೀರ್ಘಾಯುಷ್ಯಕ್ಕಾಗಿ ಮತ್ತು ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆಗಳನ್ನು ಒಳಗೊಂಡಿರುತ್ತದೆ. “ಪ್ರಧಾನಿ ಮೋದಿಯವರ ಜನ್ಮದಿನದಂದು ನಾವು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ಸಂಪೂರ್ಣ ಅನ್ನ ದಾಸೋಹವನ್ನು (ಲಂಗರ್) ಅಜ್ಮೀರ್ ಷರೀಫ್‌ನ ಭಾರತೀಯ ಅಲ್ಪಸಂಖ್ಯಾತ ಫೌಂಡೇಶನ್ ಮತ್ತು ಚಿಶ್ಟಿ ಫೌಂಡೇಶನ್ ಆಯೋಜಿಸುತ್ತಿದೆ” ಎಂದು ಸೈಯದ್ ಅಫ್ಶನ್ ಚಿಶ್ಟಿ ಮಾಧ್ಯಮದೊಂದಿಗೆ ಹೇಳಿದರು.

ಅತ್ಯಂತ ಶ್ರದ್ಧಾ, ಭಕ್ತಿ ಮತ್ತು ಕಾಳಜಿ ಕಾರ್ಯಕ್ರಮ

ಇನ್ನು ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ನಡೆಸಲಾಗುವ ಈ ಲಂಗರ್​ ಅನ್ನ ದಾಸೋಹ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ, ಭಕ್ತಿ ಮತ್ತು ಕಾಳಜಿಯಿಂದ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಈ ವೇಳೆ ಸಾವಿರಾರು ಭಕ್ತರು ಮತ್ತು ಸಾಧಕರಿಗೆ ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲಾಗುತ್ತದೆ. ಹಜ್ರಾತ್​ ಖ್ವಾಜಾ ಮುಯುನುದ್ದೀನ್​ ಚಿಶ್ತಿ ದರ್ಗಾದೊಳಗೆ ರಾತ್ರಿ 10.30ಕ್ಕೆ ದೊಡ್ಡದಾದ ಶಾಹಿ ದೆಗ್ (ಅಡುಗೆ ಪಾತ್ರೆ)​​ ಅನ್ನು ಬೆಳಗುವ ಮೂಲಕ ಈ ಕಾರ್ಯಕ್ರಮ ಆರಂಭಿಸಲಾಗುವುದು. ಶಾಂತಿ, ಏಕತೆ, ಸಮೃದ್ಧಿ ಮತ್ತು ಪ್ರಧಾನಿ ಅವರ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಿಗ್ ಶಾಹಿ ದೆಗ್ ಪಾತ್ರೆಯ ವಿಶೇಷತೆಯೇನು..?

ದರ್ಗಾದಲ್ಲಿರುವ ಬಿಗ್ ಶಾಹಿ ದೆಗ್​​ ವಿಶ್ವ-ಪ್ರಸಿದ್ಧ, ಐತಿಹಾಸಿಕ ಅಡುಗೆ ಪಾತ್ರೆಯಾಗಿದ್ದು, ಇದು 4 ಸಾವಿರ ಕೆಜಿಯಷ್ಟು ಆಹಾರ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಸಾಮೂಹಿಕ ಭೋಜನಕ್ಕಾಗಿ ಹಲವು ಶತಮಾನದಿಂದ ಈ ಪಾತ್ರೆಯನ್ನು ಅಲ್ಲಿ ಬಳಸಲಾಗುತ್ತಿದೆ. ಈ ಅಡುಗೆ ಪ್ರಕ್ರಿಯೆಯು ರಾತ್ರಿಯಿಡಿ ಸಾಗಲಿದೆ. ಈ ವೇಳೆ ರಾತ್ರಿ ಇಡೀ ಭಕ್ತರು ಮತ್ತು ಸ್ವಯಂ ಕಾರ್ಯಕರ್ತರು ಪ್ರಾರ್ಥನೆ ಮತ್ತು ದೇವರ ಸ್ಮರಣೆ ಗೀತೆಗಳಾದ ನಾಟ್ಸ್​​, ಮಂಕ್ಬಾತ್, ಕ್ವಾಲಿಸ್​ಗಳನ್ನು ಹಾಡಿಕೊಂಡು ಅಡುಗೆ ಮಾಡಲಿದ್ದಾರೆ ಎಂದು ದರ್ಗಾದ ಅಧಿಕಾರಿಗಳು ತಿಳಿಸಿದ್ದಾರೆ.