Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮನೆಯಲ್ಲಿ ಯಾರು ಇಲ್ಲದ ವೇಳೆ ಮುಂಬಾಗಿಲ ಚಿಲಕ ಮುರಿದು ಲಕ್ಷಾಂತರ ರೂ ಮೌಲ್ಯದ ನಗನಗದು ಕದ್ದ ಖದೀಮರು – ಕಹಳೆ ನ್ಯೂಸ್

ಬಂಟ್ವಾಳ: ಮನೆಯಲ್ಲಿ ಯಾರು ಇಲ್ಲದ ವೇಳೆ ಮುಂಬಾಗಿಲ ಚಿಲಕ ಮುರಿದು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗನಗದು ಕಳವುಗೈದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದುವಿನಲ್ಲಿ ನಡೆದಿದೆ.

ಪುದು ಗ್ರಾಮದ ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ಮನೆಯಿಂದ ಸುಮಾರು 3,54,000 ರೂ ಬೆಲೆ ಬಾಳುವ ಚಿನ್ನ ಹಾಗೂ ನಗದು ಕಳವು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಮ್ಮದ್ ಇಕ್ಬಾಲ್ ಅವರು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದು, ಪತ್ನಿ ಜೊತೆ ಸೆ.8 ರಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಸೆ. 12 ರಂದು ಮನೆಗೆ ವಾಪಸು ಬಂದಿದ್ದು, ಮನೆಗೆಬಂದು ನೋಡಿದಾಗ ಮುಂಬಾಗಿಲ ಚಿಲಕ ಮುರಿದು ಹಾಕಿದ್ದುಬಾಗಿಲು ತೆರದ ಸ್ಥಿತಿಯಲ್ಲಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಒಳಗಡೆ ಹೋಗಿ ನೋಡಿದಾಗ ಕೋಣೆಯ ಬಾಗಿಲು ತೆರದು ಅಲ್ಲಿದ್ಧ ಗೋಡ್ರೇಜ್ ಬೀಗ ಒಡೆಯಲಾಗಿತ್ತು. ಅದರೊಳಗೆ ಇರಿಸಲಾಗಿದ್ದ ರೂ.1,70,000 ನಗದು ಹಾಗೂ 36 ಗ್ರಾಂ ತೂಕದ ರೂ 1,80,000 ಮೌಲ್ಯದ ಬಂಗಾರದ ಪೆಂಡೆಂಟ್ ಇರುವ ಸರ, ಕಪಾಟಿನ ಮೇಲೆ ಇದ್ದರ ರೂ. 4 ಮೌಲ್ಯದ ವಿವೋ ಮೊಬೈಲ್ ಪೋನ್ ಕಳವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಅವರು ಬೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲಿಸಿದೆ.