ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಪ್ರಥಮ ಸ್ಥಾನ – ಕಹಳೆ ನ್ಯೂಸ್
ಪುತ್ತೂರು: ಶಾಲಾ ಶಿಕ್ಷಣ (ಪದವಿ ಪೂರ್ವ) ಹಾಗೂ ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ದ್ವಿತೀಯ ಪಿಯುಸಿಯ ಅವನಿ ರೈ, ಮೇಘನಾ ವಿ ಎಚ್, ಪ್ರಥಮ ಪಿಯುಸಿಯ ವೈಶಾಲಿ ಕೆ, ರಿಯಾ ಜೆ ರೈ, ಯುಕ್ತ ವರ್ಷಿಣಿ, ಶ್ರೇಯಾ ವೈ, ಸಿಂಚನ ಎಂ, ಸಾನ್ವಿ ಆರ್, ಚರಿಷ್ಮ ಕೆ, ಅನನ್ಯ ರೈ, ಕೃಪಾಶ್ರೀ, ಪೂಜಾ ಮತ್ತು ಕೆ ಮುಕ್ತಾ ರೈ ಭಾಗವಹಿಸಿದ್ದಾರೆ.