ಬಂಟ್ವಾಳ: ಹಿಂದೂ ಧರ್ಮದ ದೈವ ದೇವರುಗಳ ಹಾಗೂ ಹಿಂದೂ ಪ್ರಮುಖರ ಚಿತ್ರವನ್ನು ವ್ಯಂಗ್ಯವಾಗಿ ಚಿತ್ರಿಕರಿಸಿ ಅವಹೇಳನ: ಬಂಟ್ವಾಳ ವಿ.ಹಿಂ.ಪ, ಬಜರಂಗದಳದಿಂದ ದೂರು ದಾಖಲು-ಕಹಳೆ ನ್ಯೂಸ್
ಬಂಟ್ವಾಳ: ಹಿಂದೂ ಧರ್ಮದ ದೈವ ದೇವರುಗಳ ಹಾಗೂ ಹಿಂದೂ ಪ್ರಮುಖರ ಚಿತ್ರವನ್ನು ವ್ಯಂಗ್ಯವಾಗಿ ಚಿತ್ರಿಕರಿಸಿ ಅಸಹ್ಯ ಹಾಡುಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಆರೋಪಿಗಳ ಮೇಲೆ ಕಾನೂನು ಕ್ರಮಕ್ಕೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ಪಿ, ಬಜರಂಗದಳ ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಳ, ಪ್ರಖಂಡ ಸಂಯೋಜಕ್ ಶಿವಪ್ರಸಾದ್ ತುಂಬೆ, ಸಂದೇಶ್ ಕಾಡಬೆಟ್ಟು, ಪ್ರಶಾಂತ್ ಕೊಟ್ಟಾರಿ ಪೂಪಾಡಿಕಟ್ಟೆ, ಸಾಗರ್ ಕೊಯಿಲ, ತಿಲಕ್ ಕಿಣಿ ಬಂಟ್ವಾಳ, ರಂಜಿತ್ ಕುಮ್ಡೇಲ್, ದೇವರಾಜ್ ಕುಮ್ಡೇಲ್ ಮತ್ತಿತರು ಉಪಸ್ಥಿತರಿದ್ದರು.