Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಗರ್ಭಿಣಿ ಎಂಬ ಸುದ್ದಿ ಬೆನ್ನಲ್ಲೇ ಹೊಸ ಫೋಟೋ ಹಂಚಿಕೊಂಡ ಅವಿವಾ! ಟ್ರೆಡಿಷನ್ ಲುಕ್​ನಲ್ಲಿ ಅಭಿಷೇಕ್ ಪತ್ನಿ ಮಿಂಚಿಂಗ್! – ಕಹಳೆ ನ್ಯೂಸ್

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಈ ಬಗ್ಗೆ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಈ ಸುದ್ದಿ ಹರಿದಾಡುತ್ತಿರುವಾಗ್ಲೇ ಅವಿವಾ ಚೆಂದದ ಫೋಟೋ ಶೇರ್ ಮಾಡಿದ್ದಾರೆ.

  ಪಿಂಕ್ ಕಲರ್​ ರೇಷ್ಮೆ ಸೀರೆಯುಟ್ಟು ಅಭಿ ಪತ್ನಿ ಅವಿವಾ ತಮ್ಮ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಫೋಟೋಗಳನ್ನ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಕೆಲ ದಿನಗಳಿಂದ ಹೊಟ್ಟೆ ಕಾಣದಂತೆ ಅವಿವಾ ಫೋಟೋಗಳನ್ನು ಶೇರ್ ಮಾಡ್ತಿದ್ದು, ಗರ್ಭಿಣಿ ಸುದ್ದಿ ನಿಜವಿರಬಹುದು ಎನ್ನಲಾಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಅವಿವಾ ಮುಖದ ಗರ್ಭಿಣಿ ಕಲೆ ಎದ್ದು ಕಾಣ್ತಿದೆ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಫಾಲೋವರ್ಸ್ ಕೂಡ ಲೈಕ್​​ಗಳ ಸುರಿಮಳೆ ಗೈದಿದ್ದಾರೆ. ಸೊಸೆಯ ಚೆಂದದ ಫೋಟೋಗೆ ಸುಮಲತಾ ಅಂಬರೀಷ್ ಕೂಡ ಲೈಕ್ ಮಾಡಿದ್ದಾರೆ. ಮಾಡರ್ನ್ ಲುಕ್‌ನಲ್ಲಿ ಕಾಣಿಸ್ಕೊಳ್ಳುವ ಅವಿವಾ ಈಗ ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರು ಜೂನ್‌ 5, 2023ರಂದು ಮದುವೆ ಆಗಿದ್ದರು. ಜೂನ್‌ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆತರಕ್ಷತೆ ಕಾರ್ಯಕ್ರಮ ನಡೆಸಿದ್ದರು. ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಜೋಡಿಗೆ ಶುಭಕೋರಿದ್ರು. ಅಷ್ಟೇ ಅಲ್ಲದೇ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟ ಕೂಡ ಹಮ್ಮಿಕೊಂಡಿದ್ರು.


ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ನಟ ಅಭಿಷೇಕ್‌ ಓದುತ್ತಿದ್ದ ವೇಳೆ ಅವಿವಾರನ್ನು ನೋಡಿ ಇಷ್ಟಪಟ್ಟಿದ್ದರು. ಇವರ ಪ್ರೀತಿಗೆ ಮನೆಯವರು ಗ್ರೀನ್ ಸಿಗ್ನಲ್ ನೀಡಿದ್ರು. ಮದುವೆಯಾಗಿ ಒಂದು ವರ್ಷ ಕಳೆದಿದೆ.


ಇದೇ ವರ್ಷ ಜೂನ್‌ ತಿಂಗಳಲ್ಲಿ ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಮ್ಮ ಮಗ ಅಭಿಷೇಕ್‌ ಮತ್ತು ಸೊಸೆ ಅವಿವಾಗೆ ಸುಮಲತಾ ಅಂಬರೀಶ್‌ ಪ್ರೀತಿಯ ಶುಭಾಶಯ ತಿಳಿಸಿದ್ದರು.


“ನನ್ನ ಪ್ರೀತಿಯ ಅಬಿದೊ ಮತ್ತು ಅವಿವಾಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಪ್ರೀತಿ ಇನ್ನಷ್ಟು ಉತ್ತಮವಾಗಲಿ. ಇನ್ನಷ್ಟು ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಪ್ರೀತಿಯ ಅಪ್ಪುಗೆ ಮತ್ತು ಆಶೀರ್ವಾದ” ಎಂದು ಸುಮಲತಾ ಬರೆದಿದ್ರು.


ಅವಿವಾ ಬಿದ್ದಪ್ಪ ಮಾಡೆಲ್ ಆಗಿದ್ದಾರೆ. ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ. ತಂದೆಯಂತೆಯೇ ಅವಿವಾ ಕೂಡ ಫ್ಯಾಷನ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ಫ್ಯಾಷನ್ ಮ್ಯಾನೇಜ್ ಮೆಂಟ್ ಕಂಪನಿಯೊಂದರ ನಿರ್ದೇಶಕಿಯೂ ಆಗಿದ್ದಾರೆ.


ಅಭಿಷೇಕ್‌ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಬಿಡುಗಡೆಯಾಗಿತ್ತು. ಜನಪ್ರಿಯ ನಿರ್ದೇಶಕ ಸೂರಿ ಅವರು ಅಭಿಷೇಕ್‌ ಅಂಬರೀಶ್‌ಗಾಗಿ ಈ ಬ್ಯಾಡ್‌ ಮ್ಯಾನರ್ಸ್‌ ಚಿತ್ರ ನಿರ್ಮಿಸಿದ್ದರು.