Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಿಂದೂ ಮುಖಂಡ ‌ಶರಣ್ ಪಂಪ್ ವೆಲ್ ಗೆ ಆಡಿಯೋ ಮೂಲಕ ಚಾಲೆಂಜ್ ಹಾಕಿದ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಹಸೈನಾರ್ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ FIR ದಾಖಲು – ಕಹಳೆ ನ್ಯೂಸ್ 

ಬಂಟ್ವಾಳ: ಕೋಮು ಸಾಮರಸ್ಯದಲ್ಲಿದ್ದ ಬಂಟ್ವಾಳ ದಲ್ಲಿ ಸಾಮಾಜಿಕ ಜಾಲತಾಣಗಳ‌ ಮೂಲಕ ಪ್ರಚೋದನೆಕಾರಿಯಾಗಿ ಹೇಳಿಕೆ ನೀಡಿರುವ ಕ್ರಿಮಿನಲ್ ಪ್ರಕರಣದ ಹಿನ್ನಲೆಯಿರುವ ಶರೀಫ್ ಯಾನೆ ಚೊಟ್ಟೆ ಶರೀಫ್ ಹಾಗೂ ರೌಡಿ ಶೀಟರ್ ಹಸೈನಾರ್ ಎಂಬುವವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಕಾಂಗ್ರೆಸ್ ಕಾರ್ಯಕರ್ತ ಮಹಮ್ಮದ್ ಶರೀಫ್ ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವಿಶ್ವಹಿಂದೂ ಪರಿಷತ್ ,ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಪೋಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲು.

ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ನಾಗಮಂಗಲದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಪ್ರಾಂತ ಸಹಕಾರ್ಯದರ್ಶಿ ಹಿಂದೂ ನಾಯಕ ಶರಣ್ ಪಂಪ್ ವೆಲ್ ಅವರು ಖಂಡನೆ ಹೇಳಿಕೆಯನ್ನು ನೀಡಿದ್ದರು.ಈ‌ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಹಿನ್ನೆಲೆಯುಳ್ಳ ಗೂಂಡಾ ಪ್ರವೃತ್ತಿಯ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಎಂಬಾತ ಪಂಪ್ ವೆಲ್ ಅವರ ಬಗ್ಗೆ ಆಡಿಯೋ ಮೂಲಕ ಬೆದರಿಕೆ ಹಾಕಿದ್ದಾನೆ. ಇದು ಇಡೀ ಹಿಂದೂ ಸಮಾಜದ ಮೇಲೆ ಬೆದರಿಕೆಯಾಗಿದ್ದು, ಈತನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.