Wednesday, November 27, 2024
ಸುದ್ದಿ

ಸ್ನಾತಕೋತ್ತರ ವಿಷಯದ ಅಧ್ಯಯನದಲ್ಲಿ ಅವಕಾಶ ವಿಸ್ತಾರ : ನಿರಂಜನ್

ಪುತ್ತೂರು: ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಮಾಡಿಕೊಡುತ್ತದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಯೋಜನೆ ಹಾಕಿಕೊಳ್ಳಬೇಕು. ಮಾರುಕಟ್ಟೆ ವ್ಯವಸ್ಥೆಯು ತುಂಬ ಸವಾಲುಗಳಿಂದ ಕೂಡಿದೆ. ಅದನ್ನೆದುರಿಸುವುದಕ್ಕೆ ವಿದ್ಯಾರ್ಥಿಗಳಾಗಿದ್ದಾಗಲೆ ಸಿದ್ಧರಾಗಬೇಕು ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಹಿರಿಯ ವಿದ್ಯಾರ್ಥಿ ನಿರಂಜನ್ ತಿಳಿಸಿದರು.

ಅವರು ಕಾಲೇಜಿನಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಆಯೋಜಿಸಿದ ಹಿರಿಯ ವಿದ್ಯಾರ್ಥಿಗಳ ವೇದಿಕೆ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂದರ್ಶನ ಎನ್ನುವ ಐದು ನಿಮಿಷದ ಪರೀಕ್ಷೆ ನಮ್ಮ ಜೀವನವನ್ನು ನಿರ್ಧರಿಸುತ್ತದೆ. ಮಾತುಗಾರಿಕೆ ನಮ್ಮ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ನಾವು ಗಳಿಸಿದ ಅಂಕಗಳು ಜೀವನಕ್ಕೆ ಆಧಾರವಲ್ಲ, ವ್ಯಕ್ತಿಯ ಕ್ರಿಯಾಶೀಲತೆ ಮತ್ತು ಪರಿಶ್ರಮದಿಂದ ಸಾಧನೆಗೆ ಮುನ್ನಡಿ ಬರೆಯಬಹುದು. ಆತ್ಮ ವಿಶ್ವಾಸ ಇಲ್ಲದೆ ಇದ್ದರೆ, ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯ ಇಲ್ಲ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಶುಂಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಪೂರ್ವವಾಗಿ ತಯಾರಿ ಯೋಜನೆಗಳನ್ನು ಆಯೋಜಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳ ಪರಿಶ್ರಮ ಅಗತ್ಯ. ಪರಿಶ್ರಮಕ್ಕೆ ಕರ್ಮಫಲ ಖಂಡಿತ ದೊರೆಯುತ್ತದೆ. ಪಯಣ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಉತ್ತಮವಾಗಿ ರೂಪುಗೊಳಿಸುತ್ತದೆ ಎಂದರು.

ಹೆಚ್ಚಿನ ವಿದ್ಯಾರ್ಥಿಗಳು ಚಲನ ಚಿತ್ರ ನಟರನ್ನು ಮತ್ತು ಕ್ರಿಕೆಟ್ ತಾರೆಗಳನ್ನು ಅನುಸರಿಸುತ್ತಾರೆ. ಆದರೆ ಅದನ್ನು ಹೊರತು ಪಡಿಸಿ ಅನೇಕ ಸಾಧಕರು ನಮ್ಮ ಮುಂದೆ ಇರುತ್ತಾರೆ. ಅವರಿಂದಲೂ ನಾವು ಆದರ್ಶ ಪಡೆಯಬೇಕು. ಲೋಕ ಜ್ಞಾನ ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ.ವಿಜಯ ಸರಸ್ವತಿ, ವಿಭಾಗದ ಉಪನ್ಯಾಸಕರು ಉಪಸ್ಥಿತರಿದರು. ವಿದ್ಯಾರ್ಥಿನಿ ನವ್ಯ ಸ್ವಾಗತಿಸಿ, ಆಶಿಕ ವಂದಿಸಿ ಶ್ವೇತಾ ನಿರೂಪಿಸಿದರು.