Thursday, September 19, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಂತ ಫಿಲೋಮಿನಾ ಕಾಲೇಜು, ಪುತ್ತೂರುದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಮಾನವ ಸರಪಳಿ ಮೂಲಕ ಸೌಹಾರ್ದತೆಯ ಪ್ರದರ್ಶ-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನುಸ್ಮರಣಾರ್ಥವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನಪ್ರಾಂಶುಪಾಲರಾದ ವಂ | ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು ಅವರು, ಬೋಧಕ ಸಿಬ್ಬಂದಿ, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸಮೂಹದ ಸಕ್ರಿಯ ಭಾಗವಹಿಸುವಿಕೆ ಕಂಡುಬಂತು.

ಕಾರ್ಯಕ್ರಮದ ಅಂಗವಾಗಿ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು ಅವರು ಪ್ರಜಾಪ್ರಭುತ್ವ ದಿನದ ಶಪಥವನ್ನು ವಾಚಿಸಿ, ಪ್ರಜಾಪ್ರಭುತ್ವದ ಮಹತ್ವ, ಐಕ್ಯತೆ ಹಾಗೂ ನಾಗರಿಕ ಜವಾಬ್ದಾರಿಯನ್ನ ಕುರಿತು ನೆನಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ, ಎನ್‌ ಸಿ ಸಿ, ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್ ಕ್ರಾಸ್ ಸಮಿತಿ ಹಾಗೂ ಪ್ರದರ್ಶನ ಕಲೆ ವಿಭಾಗದ ನೂರಾರು ವಿದ್ಯಾರ್ಥಿಗಳು ಇದರಲ್ಲಿ ಅತೀವ ಆಸಕ್ತಿಯಿಂದ ಪಾಲ್ಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ್, IQAC ಸಂಯೋಜಕರಾದ ಡಾ. ಮಾಲಿನಿ ಕೆ., NSS ಅಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ. ಮತ್ತು ಶ್ರೀಮತಿ ಪುಷ್ಪಾ, ರೋವರ್ಸ್ ಮತ್ತು ರೇಂಜರ್ಸ್ ಸಂಯೋಜಕರಾದ ಖಲಂದರ್ ಶರೀಫ್ ಮತ್ತು ಶ್ರೀರಕ್ಷ, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ| ಡಿಂಪಲ್ ಜೆ. ಫರ್ನಾಂಡಿಸ್ ಮತ್ತು ಆಡಳಿತಾಧಿಕಾರಿ ಶ್ರೀಮತಿ ರೂಫಿನಾ ಡಿಸೋಜಾ ಉಪಸ್ಥಿತರಿದ್ದರು.

ಜಾಹೀರಾತು